ಬಂಟ್ವಾಳನ್ಯೂಸ್ ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ ತಾಲೂಕಿನ ಇರಾ ಗ್ರಾಮ ಪಂಚಾಯತ್ ನ ಕೊರೊನ ಗ್ರಾಮೀಣ ಕಾರ್ಯಪಡೆ ಟಾಸ್ಕ್ ಪೋರ್ಸ್ ನ ಸಮಿತಿ ಸಭೆ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮ ಮಟ್ಟದಲ್ಲಿ ಕೊರೊನ ವೈರಸ್ ತಡೆಗಟ್ಟುವ ಮತ್ತು ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಕುರಿತು ಹಲವು ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕೊರೊನ ಸಂಕಷ್ಟ ಪೀಡಿತ ಕಡುಬಡವರಿಗಾಗಿ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಹಾಗೂ ಸದಸ್ಯರ ಎರಡು ತಿಂಗಳಿನ ಗೌರವ ಧನದ ಮೂಲಕ ರೇಶನ್ ಸಾಮಗ್ರಿಗಳನ್ನು ವಿತರಿಸಲಾಯಿತು. ಉಪಾಧ್ಯಕ್ಷೆ ಚಂದ್ರಾವತಿ ಕರ್ಕೇರಾ, ಸದಸ್ಯರಾದ ಕೆ.ಟಿ.ಸುಧಾಕರ, ಎಂ.ಬಿ.ಉಮ್ಮರ್, ಮೊಯಿದಿನ್ ಕುಂಞಿ, ಗೋಪಾಲ ಅಶ್ವತ್ಥಡಿ, ರಮೇಶ ಪೂಜಾರಿ,ಶೇಖರ ಪೂಜಾರಿ, ತುಳಸಿ ಪೂಜಾರಿ, ಸವಿತ, ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಶೀಲಾ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ನಳಿನಿ.ಎ.ಕೆ. ವಂದಿಸಿದರು.