ಬಂಟ್ವಾಳನ್ಯೂಸ್, ಸಂಪಾದಕ: ಹರೀಶ ಮಾಂಬಾಡಿ
ರಾತ್ರಿ 9 ಗಂಟೆ ಆಗುತ್ತಿದ್ದಂತೆ ಮನೆಯಲ್ಲಿರುವ ವಿದ್ಯುದ್ದೀಪ ಆರಿಸಿ, ಮನೆಯ ಹೊರಗೆ ಹಣತೆಯ ದೀಪವನ್ನು ಉರಿಸಿದ ಭಾರತೀಯರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ‘ದೀಪ ಅಭಿಯಾನ’ಕ್ಕೆ ಬೆಂಬಲ ಸೂಚಿಸಿದರು.
ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ನೈತಿಕ ಬಲ ತುಂಬಲು ಹಾಗೂ 21 ದಿನಗಳ ಲಾಕ್ಡೌನ್ನಿಂದ ಕಂಗೆಟ್ಟಿರುವ ಜನರಿಗೆ ಆತ್ಮಸ್ಥೈರ್ಯ ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ‘ದೀಪ ಅಭಿಯಾನ’ ಇದು.
ಜಗತ್ತಿನಲ್ಲಿ ಮರಣ ಮೃದಂಗ ವನ್ನು ಬಾರಿಸುತ್ತಿರುವ ಕೋರೋಣ ವೈರಸ್ಸನ್ನು ಹಿಮ್ಮೆಟ್ಟಿಸುವಂತೆ ಮತ್ತು ಇದರ ವಿರುದ್ಧ ಹೋರಾಟ ಮಾಡುತ್ತಿರುವ ಜನಪ್ರತಿನಿಧಿಗಳು, ವೈದ್ಯರು, ಆರೋಗ್ಯ ಕಾರ್ಯಕರ್ತರು, ಅಧಿಕಾರಿಗಳಿಂದ ಸ್ವಚ್ಛತಾ ಕಾರ್ಮಿಕರ ವರೆಗಿನ ಎಲ್ಲರಿಗೂ ದೇವರು ಆರೋಗ್ಯ, ನೆಮ್ಮದಿ ಮತ್ತು ಶಾಂತಿಯನ್ನು ನೀಡಲೆಂದು ದೇವರಲ್ಲಿ ಪ್ರಾರ್ಥಿಸಲಾಯಿತು.
ಪಾಣೆಮಂಗಳೂರು ಕಂದಾಯ ನಿರೀಕ್ಷಕ ರಾಮ ಅವರ ಮನೆಯಲ್ಲಿ
ಬಿಜೆಪಿ ಮುಖಂಡ ದಿನೇಶ್ ಅಮ್ಟೂರು ಮನೆಯಲ್ಲಿ