ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್ ಡೌನ್ ಸಂದರ್ಭ ಸೆಲೂನ್ ಗಳು ಮುಚ್ಚಿದ್ದು, ಕೆಲವರು ಮನೆಗಳಿಗೆ ತೆರಳಿ ಕ್ಷೌರ ನಡೆಸುವ ವಿಚಾರದ ಕುರಿತು ಕೋವಿಡ್ ಹರಡದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವ ಕುರಿತು ಗಮನಹರಿಸಬೇಕಾಗುತ್ತದೆ. ಈ ಕುರಿತು ಕ್ಷೌರದಂಗಡಿ ಮಾಲೀಕರು ತಮ್ಮ ಸಿಬ್ಬಂದಿಯ ಬಗ್ಗೆ ನಿಗಾ ವಹಿಸಬೇಕು ಎಂದು ಭಾರತೀಯ ಮಾನವ ಹಕ್ಕು ಸಂರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಇಕ್ಬಾಲ್ ಹೇಳಿದ್ದಾರೆ. ಈ ಕುರಿತು ಮಂಗಳೂರು ಸಹಾಯಕ ಕಮೀಷನರ್ ಅವರಿಗೂ ಗಮನಕ್ಕೆ ತಂದಿರುವುದಾಗಿ ತಿಳಿಸಿರುವ ಅವರು, ಸೆಲೂನ್ ಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ದೇಶದ ನಾನಾ ಪ್ರದೇಶಗಳಿಂದ ಬಂದು ಇಲ್ಲಿ ಕೆಲಸ ಮಾಡುತ್ತಿರುವ ಅವರ ಸಿಬ್ಬಂದಿಗೆ ತಿಳುವಳಿಕೆ ನೀಡುವ ಕಾರ್ಯವನ್ನು ಮಾಡಬೇಕಾಗಿದ್ದು, ಮನೆ ಮನೆಗೆ ಕರೆಸಿ ಕ್ಷೌರ ಮಾಡಿಸುವವರೂ ಈ ಕುರಿತು ಗಮನ ಹರಿಸಬೇಕಾಗುತ್ತದೆ. ಕೋವಿಡ್ 19 ಹರಡುವುದನ್ನು ತಪ್ಪಿಸಲು ಸಾಕಷ್ಟು ಮುನ್ನೆಚ್ಚರಿಕೆ ಅಗತ್ಯ ಎಂದವರು ತಿಳಿಸಿದ್ದಾರೆ.