ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಸೋಂಕು ಶುಕ್ರವಾರ ಪತ್ತೆಯಾಗಿಲ್ಲ. ಗುರುವಾರವೂ ಕೊರೊನಾ ಸೋಂಕು ಪತ್ತೆಯಾಗಿರಲಿಲ್ಲ. ಇದುವರೆಗೆ ಒಟ್ಟು 9 ಮಂದಿಗೆ ಸೋಂಕು ಪತ್ತೆಯಾಗಿವೆ. ಆದರೆ ನೆರೆಯ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 7 ಮಂದಿಯಲ್ಲಿ ಪಾಸಿಟಿವ್ ಆಗಿದೆ. ಅಲ್ಲಿ ಒಟ್ಟು ಸೋಂಕಿತರ ಸಂಖ್ಯೆ 135.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 4727 ಮಂದಿ ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಇವರಲ್ಲಿ 630 ಮಂದಿಯ 28 ದಿನಗಳ ಅವಧಿ ಪೂರೈಸಿದ್ದು, ಸೋಂಕು ಬಂದಿಲ್ಲ. ಶುಕ್ರವಾರದವರೆಗೆ 282 ಮಂದಿಯ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಕಳಿಸಲಾಗಿದೆ. ಒಟ್ಟು 239 ಪರೀಕ್ಷೆಗಳ ವರದಿ ಬಂದಿದ್ದು, ಅವರಲ್ಲಿ 230 ನೆಗೆಟಿವ್ ಮತ್ತು 9 ಪಾಸಿಟಿವ್ ಪ್ರಕರಣಗಳು ಇದುವರೆಗೆ ಪತ್ತೆಯಾಗಿದೆ. ಶುಕ್ರವಾರ 16 ಮಂದಿಯ ಗಂಟಲು ದ್ರವ ಪರೀಕ್ಷೆ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿದೆ. ಇದೇ ವೇಳೆ 43 ಮಂದಿಯ ಗಂಟಲು ದ್ರವದ ಮಾದರಿಯನ್ನು ಶುಕ್ರವಾರ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.