ಜಿಲ್ಲಾ ಸುದ್ದಿ

ಮಧ್ಯಾಹ್ನ 12ರೊಳಗೆ ಖರೀದಿ ಮುಗಿಸಿ ಮನೆಯಲ್ಲಿರಿ

  • ಅಗತ್ಯವಿದ್ದರಷ್ಟೇ ಬೀದಿಗಿಳಿಯಿರಿ, ರೇಷನ್ ಅಂಗಡಿಯೂ ಓಪನ್

ಮಾ.31ರಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್ ಪ್ರಕಟಿಸಿದಂತೆ ಏ.1ರಿಂದ ಪ್ರತಿದಿನ ಬೆಳಗ್ಗೆ 7ರಿಂದ 12ರವರೆಗೆ ಅಗತ್ಯ ವಸ್ತುಗಳಿಗೆ ಸಂಬಂಧಿಸಿದ (ಹಾಲು, ತರಕಾರಿ, ದಿನಸಿ ಸಾಮಾಗ್ರಿ) ತೆರೆದಿರುತ್ತದೆ. ನಾಳೆ ಸಾರ್ವಜನಿಕರ ಓಡಾಟ ಮತ್ತು ವ್ಯಾಪಾರ ವಹಿವಾಟು ನಿರ್ಬಂಧ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ವದಂತಿ, ಹಾಗೂ ಮಾನ್ಯ ಪೊಲೀಸ್ ಆಯುಕ್ತರ ಹಿಂದಿನ ಧ್ವನಿಮುದ್ರಿಕೆ ಹಂಚಿಕೆಯಾಗುತ್ತಿರುವುದನ್ನು ಗಮನಿಸಲಾಗಿದೆ. ಮಾನ್ಯ ಜಿಲ್ಲಾಧಿಕಾರಿಗಳು ದಿನಾಂಕ 31-03-2020 ರಂದು  ಹೊರಡಿಸಿರುವ ಆದೇಶವು ಊರ್ಜಿತದಲ್ಲಿದ್ದು, ಯಾವುದೇ ಬದಲಾವಣೆ ಇಲ್ಲ , ನಾಳೆ ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆವರೆಗೆ ಅಗತ್ಯ ವಸ್ತುಗಳಿಗೆ ಅಂಗಡಿ ಮುಂಗಟ್ಟುಗಳು ತೆರೆದಿರುತ್ತವೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಜಾಹೀರಾತು

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ರೂಪೇಶ್ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದು ಅದರಂತೆ ಏಪ್ರಿಲ್ 14ರವರೆಗೆ ಜಿಲ್ಲೆಯಾದ್ಯಂತ ಬೆಳಗ್ಗೆ 7ರಿಂದ ಮಧ್ಯಾಹ್ನ 12ರ ಅವಧಿಯಲ್ಲಿ ದಿನಬಳಕೆಯ ದಿನಸಿ, ತರಕಾರಿ, ಹಣ್ಣುಹಂಪಲುಗಳ ಅಂಗಡಿ ಮುಂಗಟ್ಟು ಮಾತ್ರ ತೆರೆದಿರುತ್ತದೆ. ಉಳಿದ ಅಂಗಡಿ ಮುಂಗಟ್ಟುಗಳನ್ನು ತೆರೆಯುವುದನ್ನು ನಿಷೇಧಿಸಲಾಗಿದೆ.

  • ಪೆಟ್ರೋಲ್ ಬಂಕ್ ಗಳು ಖಾಸಗಿ ವಾಹನಗಳಿಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಮಾತ್ರ ಇಂಧನ ವಿತರಿಸುವುದು .ಸರಕು ಸಾಗಾಟ ವಾಹನಗಳಿಗೆ ಈ ನಿರ್ಬಂಧ ಇಲ್ಲ.
  • ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಪ್ರತಿ ಮನೆಯಿಂದ ಓರ್ವ ಆರೋಗ್ಯವಂತ ವ್ಯಕ್ತಿಗೆ ಮಾತ್ರ ಅವಕಾಶ.
  • ಸಾರ್ವಜನಿಕರು ಅವಸರಪಡದೆ ಗುಂಪುಗೂಡದೆ ವ್ಯಕ್ತಿಯಿಂದ ವ್ಯಕ್ತಿಗೆ ಕನಿಷ್ಠ 1 ಮೀಟರ್ ಅಂತರ ಕಾಪಾಡಿ.
  • ಸಮಯ ನಿಗದಿಪಡಿಸಿದ್ದರೂ ನಿಷೇಧಾಜ್ಞೆ ಅವಧಿಯಲ್ಲಿ ಸಾರ್ವಜನಿಕರು ವಿನಾ ಕಾರಣ ತಿರುಗಾಡುವುದು, ಗುಂಪುಗೂಡುವುದು ಮಾಡತಕ್ಕದ್ದಲ್ಲ.
  • ಅಂಗಡಿ ಮಾಲೀಕರು ಸಾಮಾಜಿಕ ಅಂತರ ಕಾಯ್ದುಕೊಳ್ಳತಕ್ಕದ್ದು.
  • ಹಾಲು ವಿತರಣಾ ವ್ಯವಸ್ಥೆ, ಔಷಧಾಲಯ, ಆನ್ಲೈನ್ ಔಷಧ ಸೇವೆ, ಗೃಹಬಳಕೆ ಇಂಧನದ ಟ್ಯಾಂಕರ್ ಗಳು, ಸಿಲಿಂಡರ್ ವಿತರಣೆ, ಪಡಿತರ ವಿತರಣಾ ವ್ಯವಸ್ಥೆ, ದಿನಪತ್ರಿಕೆ ವಿತರಣೆ ಬ್ಯಾಂಕಿಂಗ್, ಎಟಿಎಂ ಗಳಿಗೆ ವಿನಾಯತಿ ಇದೆ.
  • ಈ ಆದೇಶವು ಕರ್ತವ್ಯನಿರತ ಸರ್ಕಾರಿ ನೌಕರರ ಕರ್ತವ್ಯ ನಿರ್ವಹಣೆಗೆ ಅನ್ವಯಿಸುವುದಿಲ್ಲ.www.bantwalnews.com Editor: Harish Mambady
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ