ಮಧ್ಯಾಹ್ನ 12ರ ಬಳಿಕ ರಸ್ತೆಗಿಳಿದರೆ ವಾಹನ ಜಪ್ತಿ: ವಿಡಿಯೋ ಮತ್ತು ವಿವರಗಳಿಗೆ ಕ್ಲಿಕ್ ಮಾಡಿರಿ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬುಧವಾರದಿಂದ ಪ್ರತಿದಿನ ಬೆಳಗ್ಗೆ 7ರಿಂದ 12ರವರೆಗೆ ದಿನಸಿ, ತರಕಾರಿ, ಹಣ್ಣು ಹಂಪಲು, ಹಾಲು, ಮೆಡಿಕಲ್, ಗ್ಯಾಸ್ ವಿತರಣೆ, ಪೆಟ್ರೋಲ್, ಬ್ಯಾಂಕುಗಳ ವಹಿವಾಟಿಗೆ ತೆರೆದಿರುತ್ತದೆ. ಉಳಿದ ಅಂಗಡಿಗಳು ಬಂದ್ ಇರಬೇಕು. 12ರ ಬಳಿಕ ಮನೆ ಸೇರಬೇಕು. ಬಳಿಕ ಅನಗತ್ಯವಾಗಿ ರಸ್ತೆಗಿಳಿದರೆ ವಾಹನಗಳನ್ನು ಸೀಝ್ ಮಾಡಲಾಗುವುದು. ಗಡಿಗಳು ಬಂದ್ ಮಾಡಲಾಗುತ್ತದೆ.ಇವಿಷ್ಟು ಮಂಗಳವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ ನೀಡಿದ ಹೇಳಿಕೆಯ ಸಾರಾಂಶ.