ಬೆಳಗ್ಗಿನ ಬಿ.ಸಿ.ರೋಡ್ ನೋಟ
ನಿಷೇಧಾಜ್ಞೆಯಲ್ಲಿ ಸೂಚಿಸಲಾದ ಆದೇಶಗಳನ್ನು ದ.ಕ.ಜಿಲ್ಲೆಯ ಸಾರ್ವಜನಿಕರು ಉಲ್ಲಂಘಿಸುತ್ತಿರುವ ಪ್ರಕರಣಗಳು ವರದಿಯಾಗಿದ್ದು, ಇಂಥ ಪ್ರಕರಣ ನಿಯಂತ್ರಿಸಲು ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಅಧಿಕಾರವನ್ನು ಜಿಲ್ಲೆಯ ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್ ಅವರಿಗೆ ಜಿಲ್ಲಾಧಿಕಾರಿ ನೀಡಿದ್ದಾರೆ.
ಬಿ.ಸಿ.ರೋಡ್ ನೋಟ
ದ.ಕ.ಜಿಲ್ಲೆಯ ಸಾರ್ವಜನಿಕ ಹಿತದೃಷ್ಟಿಯಿಂದ ಸಾರ್ವಜನಿಕರು ಮುಕ್ತವಾಗಿ ಬೆರೆಯುವುದನ್ನು ತಡೆಗಟ್ಟುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಡಳಿತ ಹೇಳಿದೆ. ಬಂಟ್ವಾಳ ತಾಲೂಕಿನಲ್ಲಿ ಸಾರ್ವಜನಿಕರು ಸೂಚಿತ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಸೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದ್ದು, ಕೊರೊನಾ ಜಾಗೃತಿಗಾಗಿ ನಿರ್ಬಂಧದ ಮೊದಲ ನಿಯಮವಾದ ಮನೆಯಲ್ಲೇ ಇರಿ, ಮನೆಯಿಂದ ಹೊರಗೆ ಬರಬೇಡಿ ಎಂಬುದನ್ನು ಕಡ್ಡಾಯವಾಗಿ ಪಾಲಿಸಿ, ಅನಾವಶ್ಯಕವಾಗಿ ಗುಂಪು ಸೇರುವುದು, ವಾಹನಗಳಲ್ಲಿ ಸಂಚರಿಸುವುದು, ತಿರುಗಾಡುವುದನ್ನು ಕಂಡುಬಂದರೆ, ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಅವರು ಎಚ್ಚರಿಸಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…