ಜಾಗತಿಕ ಕೋವಿಡ್ ವೈರಸ್ ಮಹಾ ಮಾರಿ ಖಾಯಿಲೆಯನ್ನು ಜನತೆ ಗಂಭೀರವಾಗಿ ಸ್ವಯಂಪ್ರೇರಿತರಾಗಿ ಜಾಗ್ರತೆ ವಹಿಸಬೇಕು. ಜತೆಗೆ ಸರಕಾರ ಬಡ ಜನತೆಗೆ ಅಕ್ಕಿಯ ಜತೆಗೆ ದಿನಸಿ ಸಾಮಾಗ್ರಿಗಳನ್ನೂ ಉಚಿತವಾಗಿ ವಿತರಿಸುವುದಕ್ಕೆ ಕ್ರಮವಹಿಸಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಒತ್ತಾಯಿಸಿದ್ದಾರೆ.
ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಮಾಡಲಾಗಿದೆ. ಕರ್ನಾಟಕದಲ್ಲಿ ಲಾಕ್ ಡೌನ್ ಜಾರಿ ಮಾಡುವಾಗ ಕೆಲವು ವಿನಾಯಿತಿಗಳನ್ನು ಘೋಷಣೆ ಮಾಡಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ಈಗಾಗಲೇ ಉಚಿತ ಅಕ್ಕಿ ಒದಗಿಸುತ್ತಿರುವ ಜತೆಗೆ ದಿನಸಿ ಸಾಮಾಗ್ರಿಗಳಾದ ಉಪ್ಪು,ಹುಳಿ,ಮೆಣಸು, ಎಣ್ಣೆ,ತೆಂಗಿನಕಾಯಿಯನ್ನೂ ಆದ್ಯತೆಯ ಮೇರೆಗೆ ಉಚಿತವಾಗಿ ನೀಡಲು ತುರ್ತು ಕ್ರಮ ಕೈಗೊಳ್ಳಬೇಕು.ಸಾರ್ವಜನಿಕರು ಸರಕಾರದ ಆದೇಶವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಕೊರೋನಾ ವೈರಸ್ ಜನರಿಂದ ಜನರಿಗೆ ಹರಡದಂತೆ ಎಚ್ಚರಿಕೆ ವಹಿಸಲು ಅವರು ವಿನಂತಿಸಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…