ಬಂಟ್ವಾಳ ಪುರಸಭೆಯ ಪೌರಕಾರ್ಮಿಕರು ಗುರುವಾರ ದಿನವಿಡೀ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸಂಚರಿಸಿ ಮನೆ ಮನೆ ಕಸ ಸಂಗ್ರಹ ಕಾರ್ಯವನ್ನು ನಡೆಸಿದರು.
ಕೊರೊನಾ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಎಲ್ಲೆಡೆ ನಡೆಸಲಾಗುತ್ತಿದ್ದು, ಪೌರಕಾರ್ಮಿಕರೂ ಸ್ವಚ್ಛತಾ ಕಾರ್ಯವನ್ನು ನಡೆಸುವ ಮೂಲಕ ತಮ್ಮದೇ ಆದ ವಿಧಾನದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಬಂಟ್ವಾಳ ಬಡ್ಡಕಟ್ಟೆಯಲ್ಲಿ ಸಾರ್ವಜನಿಕರು ಹಾಕಿದ ರಾಶಿ ರಾಶಿ ತ್ಯಾಜ್ಯವನ್ನು ಕಸ ತೆಗೆದುಕೊಂಡು ಹೋಗುವ ಲಾರಿಗೆ ಹಾಕುತ್ತಿದ್ದ ದೃಶ್ಯ ಗುರುವಾರ ಕಂಡುಬಂತು.