ಬಂಟ್ವಾಳದಲ್ಲಿ ಗುರುವಾರ ಬೆಳಗ್ಗಿನ ಜಾವವೇ ಅಂಗಡಿಗಳಿಗೆ ಅಗತ್ಯ ವಸ್ತು ಖರೀದಿಗಾಗಿ ಜನರು ಧಾವಿಸುತ್ತಿದ್ದರು. ಈ ಸಂದರ್ಭ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಸೂಚನೆಯಂತೆ ಪುರಸಭೆಯ ಇಂಜಿನಿಯರ್ ಸಹಾಯಕ ಇಕ್ಬಾಲ್ ಮತ್ತು ಪೌರಕಾರ್ಮಿಕ ಸಿಬ್ಬಂದಿ ಸಹಿತ ಪುರಸಭೆಯ ಸಿಬ್ಬಂದಿ ಸುಣ್ಣದಿಂದ ಜನರು ಖರೀದಿಗೆ ಬರುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಹತ್ವ ತಿಳಿಸಿ, ಜನರನ್ನೂ ಅಲ್ಲೇ ನಿಲ್ಲುವಂತೆ ಮನವಿ ಮಾಡಿದರು. ಇದಕ್ಕೆ ಬಂಟ್ವಾಳದ ಜನರು ಸ್ಪಂದಿಸಿದ್ದು, ಅಂತರ ಕಾಯ್ದುಕೊಂಡೇ ಅಂಗಡಿಗೆ ತೆರಳಿ ಖರೀದಿ ನಡೆಸಿದರು. ವಿಶೇಷವಾಗಿ ಮೆಡಿಕಲ್ ಶಾಪ್ ಗಳಲ್ಲಿ ಗುರುವಾರ ಬೆಳಗ್ಗೆಯೂ ಜನಸಂದಣಿ ಇತ್ತು.
www.bantwalnews.com Editor: Harish Mambady