ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಲಾಕ್ ಡೌನ್ ದೇಶಾದ್ಯಂತ ಜಾರಿ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲೂ ಅದು ಚಾಲ್ತಿಯಲ್ಲಿರುತ್ತದೆ. ಹಾಗೆಂದ ಮಾತ್ರಕ್ಕೆ ಅಗತ್ಯ ವಸ್ತುಗಳಿಗೆ ನಿರ್ಬಂಧ ಇಲ್ಲ. ಸಾರ್ವಜನಿಕರು ಗುಂಪುಗೂಡದೆ ಅಂತರ ಕಾಪಾಡಿಕೊಂಡು ಅಗತ್ಯ ವಸ್ತುಗಳನ್ನು ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಖರೀದಿಸಬಹುದು ಎಂದು ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿನಸಿ, ತರಕಾರಿ, ಹಾಲು ಅಗತ್ಯ ವಸ್ತುಗಳು ಬೆಳಗ್ಗೆ 6 ರಿಂದ ಮಧ್ಯಾಹ್ನ 12 ತೆರೆದಿರುತ್ತದೆ. ಮೆಡಿಕಲ್, ಪೆಟ್ರೋಲ್ ಬಂಕ್ ಸಹಜವಾಗಿ ಸೇವೆಗೆ ಲಭ್ಯ ಇರುತ್ತದೆ. ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಬರುವಾಗ ಕರೋನ ಸೋಂಕು ಹರಡದಂತೆ ಜನರು ತಮ್ಮ ಮಧ್ಯೆ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಸುರಕ್ಷಾ ಮತ್ತು ಮುನ್ನಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು. ಸಾರ್ವಜನಿಕ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸುವಂತೆ ತಹಸೀಲ್ದಾರ್ ವಿನಂತಿಸಿದ್ದಾರೆ.