ಲಾಕ್ ಡೌನ್ ಮಾಡಿರುವ ಈ ಸಮಯದಲ್ಲಿ ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತರು , ವೈದ್ಯರು ಮತ್ತು ನರ್ಸ್ ಗಳ ಮೂಲಕ ಮನೆ ಮನೆಗೆ ಭೇಟಿ ಮಾಡಿಸಿ ಪರೀಕ್ಷೆ ಮಾಡಬೇಕು. ಆ ಮೂಲಕ ಪ್ರಧಾನಿಯವರ 21 ದಿನದ ಲಾಕ್ ಡೌನ್ ಕೊರೋನಾ ನಿರ್ಮೂಲನೆಗೊಳಿಸುವ ಒಂದು ಪರಿಣಾಮಕಾರಿ ಕ್ರಾಂತಿಕಾರಿ ಹೆಜ್ಜೆಯಾಗಿ ಪರಿವರ್ತಿಸಬಹುದು ಭಾರತೀಯ ಮಾನವ ಹಕ್ಕು ಸಂರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಇಕ್ಬಾಲ್ ಹೇಳಿದ್ದಾರೆ.
ಜಾಗತಿಕ ಮಹಾಮಾರಿ ಕೊರೊನಾ ವೈರಸನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರ , ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಜನತಾ ಕರ್ಪ್ಯೂ , ದೇಶವ್ಯಾಪಿ ಲಾಕ್ ಡೌನ್ ಘೋಷಿಸುವ ಮೂಲಕ ಮಹತ್ವಪೂರ್ಣ ಹೆಜ್ಜೆ ಇರಿಸಿದೆ. ಆದರೆ ಇದು ಎಷ್ಟೊಂದು ಪರಿಣಾಮಕಾರಿ ಫಲಿತಾಂಶ ನೋಡಬಹುದು ಅನ್ನುವುದರ ಬಗ್ಗೆ ಚಿಂತನೆ ಕೂಡ ಈಗಿಂದಾಗೇ ಮಾಡಬೇಕಾಗುತ್ತದೆ. ಯಾಕೆಂದರೆ ಕೊರೊನಾ ಖಾಯಿಲೆಯ ಬಗ್ಗೆ ಭಯಬಿದ್ದು ಇಂದು ಎಷ್ಟೋ ಜನ ಆಸ್ಪತ್ರೆಗೆ ಹೋಗುವುದಕ್ಕೂ ಹಿಂಜರಿದಿದ್ದಾರೆ. ಅದೆಷ್ಟೋ ಮಂದಿ ನೆಗಡಿ , ತಲೆನೋವು , ಜ್ವರ ಬಂದರೂ ಆಸ್ಪತ್ರೆಗೆ ಹೋಗದೆ ಮನೆಯಲ್ಲೇ ಉಳಿದುಕೊಂಡಿರುತ್ತಾರೆ. ಅದರಲ್ಲಿ ಎಷ್ಟು ಮಂದಿಗೆ ಕೊರೊನಾ ಸೋಂಕು ತಗುಲಿದೆಯೋ ಇಲ್ಲವೋ ಯಾರಿಗೂ ಗೊತ್ತಿರುವುದಿಲ್ಲ. ಇಲ್ಲಂದ್ರೆ ವರ್ಷಪೂರ್ತಿ ಲಾಕ್ ಡೌನ್ ಮಾಡಿದರೂ ಯಾವುದೇ ಉಪಯೋಗವಾಗದು ಎಂಬುದು ನನ್ನ ಅನಿಸಿಕೆ ಎಂದಿದ್ದಾರೆ.