ಬಂಟ್ವಾಳ

ಮಂಗಳೂರಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಸೋಂಕು ದೃಢ: ಒಟ್ಟು 5 ಕೇಸ್

ಮಂಗಳೂರಲ್ಲಿ ಮತ್ತೆ ನಾಲ್ಕು COVID ಪ್ರಕರಣಗಳು ದೃಢಪಟ್ಟಿದ್ದು, ಇವರೆಲ್ಲರೂ ಕೇರಳ ರಾಜ್ಯದವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ದಕ ಜಿಲ್ಲೆಯಲ್ಲಿ ದೃಢಪಟ್ಟ ಪ್ರಕರಣಗಳು ಒಟ್ಟು 5 ಆಗಿವೆ.

ಇದರಲ್ಲಿ 3 ಮಂದಿ ಮಂಗಳೂರಿನ ಮೊದಲ ಪ್ರಕರಣದ ವ್ಯಕ್ತಿಯ ವಿಮಾನದಲ್ಲಿ ಬಂದವರು.   ಈ ಹಿನ್ನೆಲೆಯಲ್ಲಿ ಮಾ.20ರ ಸ್ಪೈಸ್ ಜೆಟ್ (ಎಸ್.ಜಿ. 60) ಸಂಜೆ 5.30ರ ವಿಮಾನ ಮತ್ತು ಮಾ.19ರ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ (ಸಂಜೆ 5) ವಿಮಾನದಲ್ಲಿ ಪ್ರಯಾಣಿಸಿದ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಅವು ಹೀಗಿವೆ.

ಪ್ರಯಾಣಿಕರು ಕಡ್ಡಾಯ 14 ದಿನ ಗೃಹ ನಿಗಾವಣೆಯಲ್ಲಿರತಕ್ಕದ್ದು. ತಮ್ಮ ಮನೆಯವರೊಂದಿಗೂ ಬೆರೆಯತಕ್ಕದ್ದಲ್ಲ. ಮಕ್ಕಳು ವೃದ್ಧರಿದ್ದರೆ ಅವರಿಂದ ದೂರವಿರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ನಿಗಾವಣೆಯಲ್ಲಿರುವವರು ರೋಗಲಕ್ಷಣ ಕಂಡುಬಂದರೆ ತಾಲೂಕು ಆರೋಗ್ಯಾಧಿಕಾರಿ/ತಾಲೂಕು ತಹಸೀಲ್ದಾರ್ ಸಂಪರ್ಕಿಸಬಹುದು. ವಿಪತ್ತು ಘಟಕ ಕಂಟ್ರೋಲ್ ರೂಮ್ 1077 ಕ್ಕೆ ಕರೆ ಮಾಡಬಹುದು. ಯಾವುದೇ ಕಾರಣಕ್ಕೂ ನೇರವಾಗಿ ವೈದ್ಯರ ಬಳಿಗೆ ಹೋಗಬಾರದು ಎಂದು ತಿಳಿಸಿದ್ದಾರೆ.

ಕೋವಿಡ್ ಪ್ರಕರಣದ ಕುರಿತು ಆಪ್ ಅನ್ನು ಜಿಲ್ಲಾಡಳಿತ ಸಿದ್ಧಪಡಿಸಿದೆ. ಅದರ ಲಿಂಕ್ ಇಲ್ಲಿದೆ. ಕ್ಲಿಕ್ ಮಾಡಿರಿ

https://dk.nic.in/en/covid-19/

www.bantwalnews.com Editor: Harish Mambady

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ