ಬಂಟ್ವಾಳ

ಜನರಿಗಿಂತ ಮೊದಲೇ ಫೀಲ್ಡಿಗಿಳಿದ ಅಧಿಕಾರಿಗಳು- ಧ್ವನಿವರ್ಧಕದಲ್ಲಿ ಎಚ್ಚರಿಕೆ ಸೂಚನೆ

www.bantwalnews.com Editor: HARISH MAMBADY

 

ಜಾಹೀರಾತು

ಕಲ್ಲಡ್ಕದಲ್ಲಿ ಸೂಚನೆ ನೀಡುತ್ತಿರುವ ತಾಲೂಕು ಕಚೇರಿ ತಂಡ

ಬೆಳಗ್ಗಿನ ಬಿ.ಸಿ.ರೋಡ್ ನೋಟ

ಬಾಳೆಪುಣಿ ಇರಾ ಮುಖ್ಯ ರಸ್ತೆ ಹೀಗಿದೆ.

ಮಂಗಳವಾರ ಬೆಳ್ಳಂಬೆಳಗ್ಗೆಯೇ ಬಂಟ್ವಾಳ ಎಸ್.ಐ. ಅವಿನಾಶ್ ತನ್ನ ಜೀಪಿನಲ್ಲಿ ಕುಳಿತು, ಧ್ವನಿವರ್ಧಕದ ಮೂಲಕ ಬಿ.ಸಿ.ರೋಡ್ ಸಹಿತ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಜನ ಸೇರುವ ಜಾಗದಲ್ಲೆಲ್ಲಾ ಸಂಚರಿಸಿ, ಎಲ್ಲೆಲ್ಲಿ ಆಟೊ, ಕಾರು, ಜನರು ಓಡಾಡುತ್ತಿರುವುದು ಕಂಡುಬರುತ್ತದೆಯೋ ಅವರನ್ನೆಲ್ಲ ಚದುರಿಸುವ ಕಾರ್ಯ ನಡೆಸಿದರು. ಅನಗತ್ಯವಾಗಿ ಬಂದು ಸೇರಬೇಡಿ, ಆಡಳಿತದೊಂದಿಗೆ ಸಹಕರಿಸಿ, 12 ಗಂಟೆಗೆ ತರಕಾರಿ ಅಂಗಡಿಗಳನ್ನೂ ಬಂದ್ ಮಾಡಿ ಎಂಬ ಸೂಚನೆಯನ್ನು ನೀಡಿದರು. ಇದೇ ವೇಳೆ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಅವರೂ ಬೆಳಗ್ಗಿನಿಂದಲೇ ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸಿ, ಇಡೀ ತಾಲೂಕು ಸಂಚಾರ ಆರಂಭಿಸಿದರು. ಧ್ವನಿವರ್ಧಕದಲ್ಲಿ ಸೂಚನೆಗಳನ್ನು ಮೊಳಗಿಸುವ ಮೂಲಕ ಎಚ್ಚರಿಕೆ ಸಂದೇಶ ನೀಡುವಲ್ಲಿ ನಿರತರಾದರು. ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ಗ್ರಾಮ ಲೆಕ್ಕಾಧಿಕಾರಿ ಜನಾರ್ದನ, ಸಿಬ್ಬಂದಿ ಸದಾಶಿವ ಕೈಕಂಬ, ಮೊಹನ ಕಲ್ಲಡ್ಕ, ಶಿವಪ್ರಸಾದ್ ಕೃಷ್ಣ ಪುರ ಜತೆಗಿದ್ದರು.

ಈ ಮಧ್ಯೆ ಬಿ.ಸಿ.ರೋಡಿನ ಇಂದಿರಾ ಕ್ಯಾಂಟೀನ್ ಗೆ ಪೌರಕಾರ್ಮಿಕರು, ಪೊಲೀಸರು ಹಾಗೂ ಅಗತ್ಯ ಸೇವೆಯಲ್ಲಿ ನಿರತರಾದವರು ಆಗಮಿಸಿದ್ದರು. ಮಧ್ಯಾಹ್ನವೂ ಇಲ್ಲಿ ಊಟದ ವ್ಯವಸ್ಥೆ ಇದೆ ಎಂದು ಅಲ್ಲಿನ ನಿರ್ವಾಹಕರು ತಿಳಿಸಿದ್ದಾರೆ. ಬೆಳಗ್ಗೆ 12 ಗಂಟೆಯೊಳಗೆ ದಿನಸಿ ಸಾಮಗ್ರಿಗಳನ್ನು ಖರೀದಿಸಬೇಕು ಎಂಬ ಸೂಚನೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಬಿ.ಸಿ.ರೋಡಿನ ತರಕಾರಿ ಅಂಗಡಿಗಳಿಗೆ ಭೇಟಿ ನೀಡಿದರು. ಆದರೆ ಆಟೊಗಳು ಇಲ್ಲದ ಕಾರಣ ಸಣ್ಣ ಪುಟ್ಟ ತರಕಾರಿ ಅಂಗಡಿಗಳು ಸಾಮಾಗ್ರಿಗಳನ್ನು ತರಲು ಹರಸಾಹಸಪಟ್ಟರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.