ಫೊಟೋಗಳಿಗಾಗಿ ಕ್ಲಿಕ್ ಮಾಡಿ ಓದಿರಿ. ಬಂಟ್ವಾಳನ್ಯೂಸ್. ಸಂಪಾದಕ: ಹರೀಶ ಮಾಂಬಾಡಿ
ಕೊರೊನಾ ತೊಲಗಿಸಲು ಶ್ರಮಿಸುವವರಿಗೆ ಪ್ರೋತ್ಸಾಹಕವಾಗಿ ಇಡೀ ದಿನ ಸ್ವಯಂ ಕರ್ಫ್ಯೂ ಆಚರಿಸಿಕೊಂಡ ಬಂಟ್ವಾಳ ತಾಲೂಕಿನ ಜನತೆ, ಸಂಜೆ 5 ಗಂಟೆಯಾದೊಡನೆ ಚಪ್ಪಾಳೆ ತಟ್ಟಿ, ಶಂಖನಾದ, ಘಂಟಾನಾದ ಮೊಳಗಿಸಿದರು.
ಪ್ರಧಾನಿ ಮೋದಿ ಕರೆಯಂತೆ ಕರೋನಾ ನಿರ್ಮೂಲನೆಗೆ ಶ್ರಮಿಸಿದವರಿಗೆ ತನ್ನ ಮನೆ ಒಡ್ಡೂರು ಪಾರ್ಮ್ಸ್ ನಲ್ಲಿ ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕುಟುಂಬ. ಈ ಸಂದರ್ಭ 89 ವರ್ಷ ಪ್ರಾಯದ ಶಾಸಕರ ಮಾತೃಶ್ರೀ ಸರೋಜಿನಿ ನಾಯ್ಕ್, ಪತ್ನಿ ಉಷಾ ಆರ್ ನಾಯ್ಕ್, ಮಗ ಉನ್ನತ್ ನಾಯ್ಕ್ ಉಪಸ್ಥಿತರಿದ್ದರು.
ಕಲ್ಲಡ್ಕದಲ್ಲಿರುವ ಬಿಜೆಪಿ ನಾಯಕ ವಜ್ರನಾಥ ಕಲ್ಲಡ್ಕ ಅವರು ತಮ್ಮ ಮನೆಯಲ್ಲಿ ಪ್ರಧಾನಿ ಮೋದಿ ಅವರ ಕರೆಯಂತೆ ಚಪ್ಪಾಳೆ ತಟ್ಟುವ ಮೂಲಕ ಕೊರೊನಾ ವೈರಸ್ ವಿರುದ್ಧ ಜಾಗೃತಿ ಮೂಡಿಸಿದರು.
ಕಲ್ಲಡ್ಕದ ವೈದ್ಯ ಡಾ. ಚಂದ್ರಶೇಖರ್ ಮತ್ತು ಕುಟುಂಬದವರು ಕೊರೊನಾ ಜಾಗೃತಿಗೆ ಶ್ರಮಿಸುವವರ ಪರವಾಗಿ ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹಿಸಿದರು.
ಬಂಟ್ವಾಳ ತಾಲೂಕಿನ ಕೈಕುಂಜೆ ಪೂರ್ವ ಬಡಾವಣೆಯಲ್ಲಿ ನಾಗರಿಕರೆಲ್ಲರೂ ಕೊರೊನಾ ವೈರಸ್ ಗೆ ಶ್ರಮಿಸಿದವರಿಗೆ ಬೆಂಬಲ ಸೂಚಕವಾಗಿ ಭಾನುವಾರ ಸಂಜೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುವ ಮೂಲಕ ಗಮನ ಸೆಳೆದರು.
ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಸ್ವಾಮೀಜಿ ಅವರಿಂದ ದೇವತಾರ್ಚನೆ, ಭಜನೆ ಮೂಲಕ ಬೆಂಬಲ.
ಬಂಟ್ವಾಳ ಸೋಮಯಾಜಿ ಆಸ್ಪತ್ರೆಯ ಸಿಬ್ಬಂದಿ ಕರ್ತವ್ಯ ಸಲ್ಲಿಸುವುದರ ಮಧ್ಯೆ ಕೊರೊನಾ ವಿರುದ್ಧ ಹೋರಾಡುವವರಿಗೆ ಪ್ರೋತ್ಸಾಹದಾಯಕವಾಗಿ ಚಪ್ಪಾಳೆ ತಟ್ಟುವ ಮೂಲಕ ಗಮನ ಸೆಳೆದರು.
ಬಿಜೆಪಿ ಬಂಟ್ವಾಳ ಕ್ಷೇತ್ರ ಯುವಮೋರ್ಚಾ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು, ತನ್ನ ಮನೆಯಲ್ಲಿ ಭಾನುವಾರ ಪ್ರಧಾನಿ ಕರೆಯಂತೆ ಚಪ್ಪಾಳೆ ತಟ್ಟುವ ಮೂಲಕ ಕೊರೊನಾ ವಿರುದ್ಧ ಜನಜಾಗೃತಿ ಮೂಡಿಸಿ, ಹೋರಾಡುವ ವೈದ್ಯರು ಮತ್ತಿತರರ ಪರ ಪ್ರೋತ್ಸಾಹ ನೀಡಿದರು.
ಬಂಟ್ವಾಳದ ಕೈಕಂಬದಲ್ಲಿರುವ ಸದಾಶಿವ ಕೈಕಂಬ ಅವರ ಮನೆಯ ಸದಸ್ಯರು ಚಪ್ಪಾಳೆ ತಟ್ಟಿ ಕೊರೊನಾ ವೈರಸ್ ತಡೆಗೆ ಶ್ರಮಿಸುವವರನ್ನು ಪ್ರೋತ್ಸಾಹಿಸಿದರು.
ಬಂಟ್ವಾಳ ತಾಲೂಕಿನ ರಾಯಿ ಸಮೀಪದ ಕೈತ್ರೋಡಿ ಗಾಣದಮನೆ ದಿವಂಗತ ಕೆ.ಶೀನ ಸಪಲ್ಯ ಇವರ ಮನೆಯಲ್ಲಿ ಕುಟುಂಬದ ಸದಸ್ಯರು ಭಾನುವಾರ ಸಂಜೆ ಒಟ್ಟಾಗಿ ಚಪ್ಪಾಳೆ ತಟ್ಟುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ಕರೋನ ವೈರಸ್ ಹೊಡೆದೋಡಿಸಲು ಶ್ರಮಿಸುತ್ತಿರುವವರನ್ನು ಬೆಂಬಲಿಸಿ ಗಮನ ಸೆಳೆದರು.
ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಅವರ ಕುಟುಂಬ ಸದಸ್ಯರು ಚಪ್ಪಾಳೆ ತಟ್ಟಿದ ಕ್ಷಣ.
ಕೊರೊನೊ ವೈರಸ್ ಎಂಬ ಮಹಾಮಾರಿಯನ್ನು ಹೋಗಲಾಡಿಸಲು ಶ್ರಮಿಸಿದವರಿಗೆ ಬಿಜೆಪಿ ನಾಯಕ ದಿನೇಶ್ ಅಮ್ಟೂರು ಮತ್ತು ಮನೆಯವರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಚಪ್ಪಾಳೆ ತಟ್ಟುವ ಮೂಲಕ ಕೊರೊನಾ ವೈರಸ್ ಹೋಗಲಾಡಿಸುವವರನ್ನು ಬೆಂಬಲಿಸಿದರು.
ಬಂಟ್ವಾಳ ತಾಲೂಕಿನ ಕೈಕುಂಜೆ ನಿವಾಸಿ ಚಿತ್ರಕಲಾವಿದ ಪ್ರೊ. ಅನಂತಪದ್ಮನಾಭ ರಾವ್ ಅವರು ಘಂಟಾನಾದ ಮೂಲಕ ಕೊರೊನಾ ವಿರುದ್ಧ ಹೋರಾಡುವವರ ಪರ ಪ್ರೊತ್ಸಾಹ ನೀಡಿದರು.
ಬಿ.ಸಿ.ರೋಡಿನ ಕೈಕುಂಜದಲ್ಲಿರುವ ಪುಂಡರೀಕಾಕ್ಷ ಆಚಾರ್ಯ ಮನೆಯ ಹೊರಗೆ ಬಂದು ಶಂಖನಾದ, ಘಂಟಾನಾದ ಮತ್ತು ಚಪ್ಪಾಳೆ ಹೊಡೆಯುವ ಮೂಲಕ ಕೊರೊನಾವಿರುದ್ಧ ಜನಜಾಗೃತಿ ಮೂಡಿಸಿದರು.