ಬಂಟ್ವಾಳ

ಎ.ಸಿ. ಸೂಚನೆಯಂತೆ ಕಸ ವಿಲೇವಾರಿ – ಪ್ರತಿಭಟನೆಗೂ ತಯಾರಿ

ಕಂಚಿನಡ್ಕಪದವಿನಲ್ಲಿ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯನ್ನು ನಡೆಸಲು ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಮಂಗಳೂರು ಸಹಾಯಕ ಆಯುಕ್ತ ಖಡಕ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭಾಡಳಿತ ಅದನ್ನು ಪಾಲಿಸುವ ಪ್ರಕ್ರಿಯೆಗೆ ಸಜ್ಜಾಗುತ್ತಿದೆ. ಈ ನಡುವೆ ತ್ಯಾಜ್ಯವನ್ನು ತರಲು ಬಿಡುವುದಿಲ್ಲ ಎಂದು ಹೇಳಿರುವ ಸಜಿಪನಡು ಗ್ರಾಮಸ್ಥರು ಅದನ್ನು ವಿರೋಧಿಸಲು ಸೋಮವಾರ ತಯಾರಾಗಿ ನಿಂತ ಘಟನೆಯೂ ನಡೆಯಿತು.

ಜಾಹೀರಾತು

ಸಹಾಯಕ ಕಮೀಷನರ್ ಸೂಚಿಸಿದಂತೆ ಎಲ್ಲ ತಯಾರಿಗಳನ್ನು ನಡೆಸಲಾಗುತ್ತಿದೆ. ಪುರಸಭೆಯ ಸೂಚಿತ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ನಡೆಸಲಾಗುತ್ತಿದ್ದು, ಇದು ಒಣಕಸದ ವಿಲೇವಾರಿಯಷ್ಟೇ. ಇದರಿಂದ ಯಾರಿಗೂ ತೊಂದರೆ ಆಗುವುದಿಲ್ಲ, ಈ ಕುರಿತು ಗ್ರಾಪಂಗೆ ಪುರಸಭೆ ಮಾಹಿತಿ ನೀಡಿದೆ.  ಈ ಮಧ್ಯೆ ಸೋಮವಾರ ಕಸದ ವಾಹನಗಳು ಸಜೀಪನಡುವಿಗೆ ತೆರಳಲಿಲ್ಲ.

ಇಲ್ಲಿನ‌ ಸಮಸ್ಯೆ ನಿವಾರಿಸದೆ ಪರಿಸರ ಇಲಾಖೆ ನಿಬಂಧನೆಗಳನ್ನು ಪಾಲಿಸದೆ ಇಲಾಖೆ ತ್ಯಾಜ್ಯವನ್ನು ಇಲ್ಲಿ ಹಾಕಲು ನಾವು ಬಿಡುವುದಿಲ್ಲ ಎಂದಿರುವ ಗ್ರಾಪಂ ಅಧ್ಯಕ್ಷ ಮಹಮ್ಮದ್ ನಾಸೀರ್, ಪ್ರಮುಖರಾದ ಅಬುಬಕ್ಕರ್ ಸಜಿಪ, ತ್ಯಾಜ್ಯ ತಂದು ಸುರಿದರೆ ಪ್ರತಿಭಟನೆ ನಡೆಸುತ್ತೇವೆ ಎಂದಿದ್ದಾರೆ.

www.bantwalnews.com ಸಂಪಾದಕ: ಹರೀಶ ಮಾಂಬಾಡಿ.

ಸಹಾಯಕ ಕಮೀಷನರ್ ನೇತೃತ್ವದಲ್ಲಿ ಮಾ.14ರಂದು ನಡೆದ ಸಭೆ

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.