ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಬಿ.ದೇವದಾಸ ಶೆಟ್ಟಿ ಸೋಮವಾರ ಬೆಳಗ್ಗೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಬಳಿ ಇರುವ ಬುಡಾ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭ ನಡೆದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಬೆಳೆಯುತ್ತಿರುವ ಬಂಟ್ವಾಳವನ್ನು ಯೋಜನಾಬದ್ಧವಾಗಿ ಅಚ್ಚುಕಟ್ಟಾಗಿ ರೂಪಿಸುವ ಮಹತ್ತರ ಜವಾಬ್ದಾರಿ ದೇವದಾಸ ಶೆಟ್ಟರಿಗಿದೆ. ಶಾಸಕ ರಾಜೇಶ್ ನಾಯ್ಕ್ ಅವರ ಮುಂದಾಳತ್ವದಲ್ಲಿ ಗೋವಿಂದ ಪ್ರಭು ಸಹಿತ ಹಿರಿಯರ ಮಾರ್ಗದರ್ಶನದಲ್ಲಿ ಜನಸ್ನೇಹಿಯಾದ ಮಾರ್ಗದರ್ಶನ ಪ್ರಾಧಿಕಾರದಿಂದ ದೊರಕುವಂತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಹಲವು ಜನಪರ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ. ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಬಲ ಬಂದಂತಾಗಿದೆ. ಈ ಸಂದರ್ಭ ಯೋಜನಾ ಪ್ರಾಧಿಕಾರದಿಂದ ನಗರಾಭಿವೃದ್ಧಿಗೆ ಮತ್ತಷ್ಟು ಒತ್ತು ದೊರಕಲಿದೆ ಎಂದು ಶುಭ ಹಾರೈಸಿದರು.
ಇದೇ ವೇಳೆ ಪ್ರಾಧಿಕಾರದ ಸದಸ್ಯರಾದ ಭಾಸ್ಕರ್ ಕುಲಾಲ್, ಸಚಿನ್ ಮೇಲ್ಕಾರ್ ಮತ್ತು ರಾಮಪ್ರಸಾದ್ ಅವರನ್ನು ಅತಿಥಿಗಳು ಅಭಿನಂದಿಸಿದರು. ಈ ಸಂದರ್ಭ ಮಾತನಾಡಿದ ಬಿ.ದೇವದಾಸ ಶೆಟ್ಟಿ, ಪಕ್ಷದ ಹಿರಿಯರಾದ ಜಿ.ಆನಂದ ಅವರನ್ನು ಸ್ಮರಿಸಿ, ಹಿರಿಯರ ಮಾರ್ಗದರ್ಶನವನ್ನು ಕೋರಿದರು. 2009ರಲ್ಲಿ ಬಿಜೆಪಿ ಸರಕಾರ ಇದ್ದಾಗ ಬುಡಾ ಅಸ್ತಿತ್ವಕ್ಕೆ ಬಂದಿದ್ದು, ನಾನು ನಾಲ್ಕನೇ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ, ಎಲ್ಲರ ಸಹಕಾರ ಅಗತ್ಯ ಎಂದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಾಮದಾಸ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಜಿಪಂ ಸದಸ್ಯರಾದ ಕಮಲಾಕ್ಷಿ ಪೂಜಾರಿ, ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ, ಬುಡಾ ಮಾಜಿ ಅಧ್ಯಕ್ಷ, ಪುರಸಭೆ ಹಿರಿಯ ಸದಸ್ಯ ಎ.ಗೋವಿಂದ ಪ್ರಭು, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂದೇಶ್ ಶೆಟ್ಟಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬಿಜೆಪಿ ಪ್ರಮುಖರಾದ ಕೆ.ಹರಿಕೃಷ್ಣ ಬಂಟ್ವಾಳ್, ಕ್ಯಾ.ಬ್ರಿಜೇಶ್ ಚೌಟ, ಸುಲೋಚನಾ ಜಿ.ಕೆ. ಭಟ್, ನಾರಾಯಣ ಗಟ್ಟಿ, ಪ್ರಕಾಶ್ ಅಂಚನ್, ಯಶೋಧರ ಕರ್ಬೆಟ್ಟು, ಸೀತಾರಾಮ ಪೂಜಾರಿ, ಗಣೇಶ್ ರೈ ಮಾಣಿ, ರೊನಾಲ್ಡ್ ಡಿಸೋಜ, ಪುರುಷೋತ್ತಮ ಶೆಟ್ಟಿ ವಾಮದಪದವು, ಪ್ರಭಾಕರ ಪ್ರಭು, ರಮನಾಥ ರಾಯಿ, ದಿನೇಶ್ ಅಮ್ಟೂರು, ನಂದರಾಮ ರೈ, ಉದಯಕುಮಾರ ರಾವ್,
ಪ್ರದೀಪ್ ಅಜ್ಜಿಬೆಟ್ಟು, ಶ್ರೀಕಾಂತ್ ಶೆಟ್ಟಿ ಸಜೀಪ, ಪ್ರಮೋದ್ ಕುಮಾರ್ ಅಜ್ಜಿಬೆಟ್ಟು ಬಂಟ್ವಾಳ ಪುರಸಭೆಯ ಬಿಜೆಪಿ ಸದಸ್ಯರು ಸೇರಿದಂತೆ ಹಲವಾರು ಗಣ್ಯರು ಕಚೇರಿಗೆ ಭೇಟಿ ನೀಡಿ ಶುಭಹಾರೈಸಿದರು. ಬೂಡಾ ಕಾರ್ಯದರ್ಶಿ ಅಭಿಲಾಷ್ ಅವರು ಉಪಸ್ಥಿತರಿದ್ದರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127