ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಕಾಲಾವಧಿ ಬ್ರಹ್ಮರಥೋತ್ಸವ ಸೋಮವಾರ ಸೇರಿದ್ದ ಊರ, ಪರವೂರ ನೂರಾರು ಭಕ್ತರ ಸಮ್ಮುಖ ವೈಭವದಿಂದ ಸಂಜೆ ಆರಂಭಗೊಂಡಿತು.
ಶ್ರೀ ತಿರುಮಲ ವೆಂಕಟರಮಣ ದೇವರಿಗೆ ಮಲ್ಲಿಗೆ ಹರಿಕೆ ಒಪ್ಪಿಸಲು ಸಾಲುಗಟ್ಟಿ ಜನರು ನಿಂತರು. ಸೋಮವಾರ ಬೆಳಗ್ಗೆ ಪ್ರಾರ್ಥನೆ ಬಳಿಕ ಮಹಾಪೂಜೆ, ಯಜ್ಞಾದಿಗಳು ನಡೆದವು. ಸಂಜೆ ೫.೩೦ಕ್ಕೆ ಬ್ರಹ್ಮರಥಾರೋಹಣ, ಸಮಾರಾಧನೆ, ರಾತ್ರಿ ಬ್ರಹ್ಮರಥೋತ್ಸವ ನಡೆಯಿತು. ಮಂಗಳವಾರ ದ್ವಾರಪೂಜೆ, ಚೂರ್ಣೋತ್ಸವ, ಅವಭೃತೋತ್ಸವ, ನದಿಸ್ನಾನ, ರಾತ್ರಿ ಸಣ್ಣರಥೋತ್ಸವ ನಡೆಯಲಿದೆ. ಫೆ.೨೭ರಂದು ಜಾತ್ರೋತ್ಸವ ಆರಂಭಗೊಂಡಿದ್ದು, ೨೭ರಂದು ಗರುಡೋತ್ಸವ, ೨೮ರಂದು ಹನುಮಂತೋತ್ಸವ ನಡೆದಿತ್ತು. ಶನಿವಾರ ರಾತ್ರಿ ಚಂಡ್ರಮಂಡಲೋತ್ಸವ ನಡೆಯಿತು. ಭಾನುವಾರ ಜೀರ್ಣೋದ್ಧಾರ ಪುನರ್ ಪ್ರತಿಷ್ಠಾಚರಣೆ, ಸಣ್ಣರಥೋತ್ಸವ ನಡೆದವು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127