ಬಂಟ್ವಾಳ : ಸಂವಿಧಾನ ಸಂರಕ್ಷಣಾ ಸಮಿತಿ ಬಂಟ್ವಾಳ ವತಿಯಿಂದ ದೆಹಲಿ ಹಿಂಸಾಚಾರ ಖಂಡಿಸಿ ತಾಲೂಕಿನ ವಿವಿಧ ಕಡೆಗಳಲ್ಲಿ ಏಕಕಾಲದಲ್ಲಿ ಮೊಂಬತ್ತಿ ಹಿಡಿದು ಪ್ರತಿಭಟನೆ ನಡೆಸಲಾಯಿತು.
ಫರಂಗಿಪೇಟೆ : ಪ್ರತಿಭಟನೆಯು ಫರಂಗಿಪೇಟೆ ಜುಮಾ ಮಸೀದಿ ವಠಾರದಲ್ಲಿ ನಡೆಯಿತು. ಪ್ರತಿಭಟೆಯನ್ನುದ್ದೇಶಿಸಿ ಶರೀಫ್ ಅಮೆಮ್ಮಾರ್ ಮಾತನಾಡಿದರು. ಸಂವಿಧಾನ ಸಂರಕ್ಷಣಾ ಸಮಿತಿ ಸದಸ್ಯ ಭಾವಾಕ ಫರಂಗಿಪೇಟೆ, ಫರಂಗಿಪೇಟೆ ಜುಮಾ ಮಸೀದಿ ಕೋಶಾಧಿಕಾರಿ ಮಜೀದ್ , ಬುಖಾರಿ ಕುಂಪನಮಜಲು, ಅಬೂಬಕರ್, ಸುಲೈಮಾನ್ ಉಸ್ತಾದ್ ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.
ತುಂಬೆ : ಪ್ರತಿಭಟನೆಯು ತುಂಬೆ ಜಂಕ್ಷನ್ ಬಳಿ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ತುಂಬೆ ಜುಮಾ ಮಸೀದಿ ಖತೀಬರಾದ ಅಬ್ದುಲ್ ಲತೀಫ್ ಫೈಝಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಟಿ.ಕೆ ಶರೀಫ್, ಸಮಿತಿ ಕಾರ್ಯದರ್ಶಿ ಇರ್ಫಾನ್ ತುಂಬೆ, ತುಂಬೆ ಜುಮಾ ಮಸೀದಿ ಅಧ್ಯಕ್ಷರಾದ ಇಮ್ತಿಯಾಝ್ ಆಲ್ಫಾ , ಪ್ರಧಾನ ಕಾರ್ಯದರ್ಶಿ ಮೂಸಬ್ಬ, ಸದಸ್ಯ ಅಝೀಝ್, ತುಂಬೆ ಗ್ರಾಮ ಪಂಚಾಯತ್ ಸದಸ್ಯ ಝಹೂರ್ ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.
ಕೈಕಂಬ : ಪ್ರತಿಭಟನೆಯು ಕೈಕಂಬ ಜಂಕ್ಷನ್ ಬಳಿ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಸಂವಿಧಾನ ಸಂರಕ್ಷಣಾ ಸಮಿತಿ ಉಪಾಧ್ಯಕ್ಷರಾದ ಅಬೂಬಕರ್ ಕೆ.ಎಚ್ ಹಾಗೂ ಸಮಿತಿ ಕಾರ್ಯದರ್ಶಿ ಲುಕ್ಮಾನ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಮೂನಿಶ್ ಅಲಿ, ಖಜಾಂಜಿ ಮುಹಮ್ಮದ್ ಸಾಗರ್ ಪರ್ಲಿಯಾ, ಕಾರ್ಯದರ್ಶಿಯಾದ ಸಾಹುಲ್ ಹಮೀದ್ ಎಸ್.ಪಿ, ಸಮಿತಿ ಸದಸ್ಯರಾದ ರಹೀಂ ಪಿ.ಎ, ಅನ್ವರ್ ಕಲ್ಲಂಗಲ, ಸಾಹುಲ್ ಹಮೀದ್ ಪರ್ಲಿಯ ಮತ್ತು ಊರಿನ ನಾಗರಿಕರು ಉಪಸ್ಥಿತರಿದ್ದರು.
ಕಲ್ಲಡ್ಕ : ಪ್ರತಿಭಟನೆಯು ಕಲ್ಲಡ್ಕ ಮಸೀದಿ ವಠಾರ ಬಳಿ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಕಲ್ಲಡ್ಕ ಜುಮಾ ಮಸೀದಿ ಖತೀಬರಾದ ಶೇಕ್ ಮುಹಮ್ಮದ್ ಇರ್ಫಾನ್ ಅಝ್ಹರಿ ಹಾಗೂ ಸಂವಿಧಾನ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಇಮ್ತಿಯಾಝ್ ಗೋಳ್ತಮಜಲು ಮಾತನಾಡಿದರು. ಮಸೀದಿಯ ಪ್ರಧಾನ ಕಾರ್ಯದರ್ಶಿ ಹಮೀದ್ ಗೋಲ್ಡನ್, ಮಸೀದಿ ಸಮಿತಿ ಸದಸ್ಯರಾದ ಹುಸೈನ್, ಜವಾಝ್, ಗೋಳ್ತಮಜಲು ಪಂಚಾಯತ್ ಸದಸ್ಯರಾದ ಯೂಸುಫ್ ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.
ಅಮ್ಮುಂಜೆ : ಪ್ರತಿಭಟನೆಯು ಮಸೀದಿ ವಠಾರದ ಬಳಿ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಸಮಿತಿ ಸದಸ್ಯರಾದ ಉಸ್ಮಾನ್ ಕಲಾಯಿ ಮಾತನಾಡಿದರು. ಎನ್.ಆರ್.ಸಿ ವಿರೋಧಿ ಹೋರಾಟ ಸಮಿತಿ ಅಮ್ಮುಂಜೆ ಅಧ್ಯಕ್ಷರಾದ ಅಬೂಬಕರ್ PWD , ಎಮ್.ಟಿ ಹಕೀಂ ಕಲಾಯಿ, ಬಿ.ಎಚ್ ಆದಮ್ , ಬಿ.ಎಚ್ ಸಲಾಂ, ಪಂಚಯತ್ ಸದಸ್ಯರಾದ ನವಾಝ್, ಅಬ್ದುಲ್ ರಝಾಕ್ ಟಿ.ಎಚ್ ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.
ಸಜಿಪ : ಪ್ರತಿಭಟನೆಯು ಸಜಿಪ ಜಂಕ್ಷನ್ ಬಳಿ ನಡೆಯಿತು. ಸಜಿಪನಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಸಿರ್ ಸಜಿಪ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಸಂವಿಧಾನ ಸಂರಕ್ಷಣಾ ಸಮಿತಿ ಸದಸ್ಯರಾದ ನೌರಿಶ್ ಸಜಿಪ ಟಿಪ್ಪು ಗೈಸ್ ಅಧ್ಯಕ್ಷ ಸ್ವದಕತುಲ್ಲಾ, ಸಜಿಪ ಗ್ರಾಮ ಪಂಚಾಯತ್ ಸದಸ್ಯರಾದ ಎಸ್.ಎನ್ ಅಬ್ದುಲ್ ರಹ್ಮಾನ್, ಇಕ್ಬಾಲ್ ಬೈಲಗುತ್ತು, ಅಬ್ದುಲ್ ರಶೀದ್, ರಿಕ್ಷಾ ಚಾಲಕ ಮತ್ತು ಮಾಲಕ ಸಂಘದ ಅದ್ಯಕ್ಷ ಎಸ್.ಕೆ ಬಶೀರ್ ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.