ಬಂಟ್ವಾಳ

ಒಡ್ಡೂರು ಫಾರ್ಮ್ಸ್ ನಲ್ಲಿ ಶತಚಂಡಿಕಾಯಾಗ, ಧರ್ಮನೇಮ ಸಂಪನ್ನ

ಬಂಟ್ವಾಳ :  ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಒಡ್ಡೂರು ಫಾಮ್೯ ಹೌಸ್ ನಲ್ಲಿ ಸಂಭ್ರಮದ ವಾತಾವರಣ.. ಬೆಳಿಗ್ಗಿನಿಂದ ಮಧ್ಯಾಹ್ನದವರೆಗೆ ಶತಚಂಡಿಕಾಯಾಗ  ಸಂಪನ್ನಗೊಂಡರೆ, ಮಧ್ಯಾಹ್ನದಿಂದ ರಾತ್ರಿವರೆಗೆ ಸಾಂಸ್ಕೃತಿಕ ವೈಭವ ಮೇಳೈಸಿತು. ಬಳಿಕ ಧರ್ಮನೇಮ ಜರಗಿತು.

ಎಡಪದವು ವೆಂಕಟೇಶ್ ತಂತ್ರಿಯವರ ನೇತೃತ್ವ, ರತೀಶ್ ಭಟ್  ಮತ್ತವರ ತಂಡದ ಪೌರೋಹಿತ್ವದಲ್ಲಿ ನಡೆದ ಶತಚಂಡಿಕಾಯಾಗದಲ್ಲಿ ಶ್ರೀಕ್ಷೇತ್ರ ಒಡಿಯೂರಿನ ಶ್ರೀಗುರುದೇವಾನಂದ ಸ್ವಾಮೀಜಿ,ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ್ ಸ್ವಾಮೀಜಿ,ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ,ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಉಳಿಪಾಡಿಗುತ್ತು ತಾರನಾಥ ಆಳ್ವ ಮೊಕ್ತೇಸರರಾದ ಸೂರ್ಯನಾರಾಯಣ ರಾವ್, ಪವಿತ್ರಪಾಣಿ ಮಾಧವ ಭಟ್ ಸಹಿತ ಭಕ್ತ ಸಮೂಹದ ಸಮಕ್ಷಮದಲ್ಲಿ ಯಾಗ ದೀಕ್ಷೆಯನ್ನು ಸ್ವೀಕರಿಸಿದ್ದ ಶಾಸಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಮತ್ತವರ ಪತ್ನಿ ಉಷಾ.ಆರ್.ನಾಯ್ಕ್ ಶತಚಂಡಿಕಾಯಾಗದ ಪೂರ್ಣಾಹುತಿಯನ್ನು ನೆರವೇರಿಸಿದರು.

ಬಳಿಕ ನೂತನ  ಧರ್ಮಚಾವಡಿಯ ಮುಂಭಾಗ ರಾತ್ರಿ ನಡೆಯಲಿರುವ  ಶ್ರೀ ಕೊಡಮಣಿತ್ತಾಯ ಧರ್ಮದೈವದ ಧರ್ಮನೇಮಕ್ಕೆ ಭಂಡಾರ ಏರಿತು. ಈ ಸಂದರ್ಭದಲ್ಲಿ ದರ್ಶನಪಾತ್ರಿಯಿಂದ ದರ್ಶನ ಸೇವೆ  ತದನಂತರ ಪಲ್ಲಪೂಜೆ ನಡೆದು ಸಾರ್ವಜನಿಕ ಅನ್ನ ಸಂತರ್ಪಣೆ ಆರಂಭಗೊಂಡಿತು.

ಸಚಿವರು,ಶಾಸಕರು,ಗಣ್ಯರ ದಂಡು: ಯಾಗದ ಆರಂಭಗೊಂಡು ಪೂರ್ಣಾಹುತಿಯಾದ ಬಳಿಕವು ಕೇಂದ್ರ ,ರಾಜ್ಯ ಸಚಿವರು, ಶಾಸಕರು,ಗಣ್ಯಾತಿಗಣ್ಯರ ದಂಡ ಒಡ್ಡೂರು ಧರ್ಮಚಾವಡಿಯತ್ತ ಅಗಮಿಸುತ್ತಲೇ ಇತ್ತು.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ರಾಜ್ಯದ ಸಚಿವರುಗಳಾದ ಸುರೇಶ್ ಕುಮಾರ್, ನಾರಾಯಣ ಗೌಡ,ಜಗದೀಶ್ ಶೆಟ್ಟರ್,ಕೋಟ ಶ್ರೀನಿವಾಸ ಪೂಜಾರಿ, ಭೈರತಿ ಸುರೇಶ್,ಸಂಸದರಾದ ನಳೀನ್ ಕುಮಾರ್ ಕಟೀಲ್,ಶೋಭಾ ಕರಂದ್ಲಾಜೆ,ಶಾಸಕರಾದ ವೇದವ್ಯಾಸ ಕಾಮತ್,ಅಂಗಾರ, ಉಮಾನಾಥ ಕೋಟ್ಯಾನ್,  ಡಾ.ಭರತ್ ಶೆಟ್ಟಿ, ಯು.ಟಿ.ಖಾದರ್, ಸುಕುಮಾರ್ ಶೆಟ್ಟಿ,   ಮಸಾಲೆ ಜಯರಾಮ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು  ರತ್ನಾಕರ ಹೆಗ್ಡೆ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಪಂ ಸದಸ್ಯರಾದ ತುಂಗಪ್ಪ ಬಂಗೇರ,ಕಮಲಾಕ್ಷಿ ಪೂಜಾರಿ, ಮಂಜುಳಾ ಮಾವೆ,ಯು.ಪಿ.ಇಬ್ರಾಹಿಂ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ,ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬಿಜೆಪಿ ಮುಖಂಡರಾದ ಜಗದೀಶ್ ಅಧಿಕಾರಿ, ಸಂದೇಶ್ ಶೆಟ್ಟಿ, ಸುಲೋಚನಾ ಜಿ.ಕೆ.ಭಟ್,ಉದಯಕುಮಾರ್ ರಾವ್ ಬಂಟ್ವಾಳ, ದಿನೇಶ್ ಅಮ್ಟೂರು ,ಬ್ರಿಜೇಶ್ ಚೌಟ, ದಿನೇಶ್ ಭಂಡಾರಿ,ರಾಮದಾಸ್ ಬಂಟ್ವಾಳ,ದೇವದಾಸ್ ಶೆಟ್ಟಿ ಬಂಟ್ವಾಳ,ದೇವಪ್ಪ ಪೂಜಾರಿ ಬಾಳಿಕೆ,ಮೋನಪ್ಪ ದೇವಸ್ಯ,ಪ್ರಭಾಕರ ಪ್ರಭು,ಯಶವಂತ ಪೂಜಾರಿ ಪೊಳಲಿ,ವೆಂಕಟೇಶ್ ನಾವುಡ,ಪ್ರಮೋದ್ ಕುಮಾರ್ ಅಜ್ಜಿಬೆಟ್ಟು,ಗಣೇಶ್ ರೈ ಮಾಣಿ, ರಂಜಿತ್ ಮೈರ, ಪುರುಷೋತ್ತಮ ಶೆಟ್ಟಿ ವಾಮದಪದವು, ಶ್ರೀಕಾಂತ್ ಶೆಟ್ಟಿ ಸಜಿಪ , ಯಶೋಧರ ಕರ್ಬೆಟ್ಟು ನರಿಕೊಂಬು, ಪುಪ್ಪರಾಜ ಚೌಟ,ತನಿಯಪ್ಪ ಗೌಡ,ಚೆನ್ನಪ್ಪ ಆರ್.ಕೋಟ್ಯಾನ್ , ಡಾ.ಕಮಲಾ ಪ್ರಭಾಕರ ಭಟ್, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ,ಯೋಗೀಶ್ ಭಟ್, ಶಕುಂತಲಾ ಶೆಟ್ಟಿ, ಬಂಟರಯಾನೆ ನಾಡವರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ,ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ, ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ, ಬಂಟವಾಳ ಬಂಟರ ಸಂಘದ ಅಧ್ಯಕ್ಷವಿವೇಕ್ ಶೆಟ್ಟಿ ನಗ್ರಿಗುತ್ತು, ಮಂಜುನಾಥ ಶೆಟ್ಟಿ ಶೆಡ್ಡೆ , ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರಕಾಶ್ ಶೆಟ್ಟಿ ಮುಂಬೈ , ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಎಸ್.ಆರ್.,ಭುವನೇಶ್ ಪಚ್ಚಿನಡ್ಕ, ಹಿಜಾವೇ ಮುಖಂಡ ರಾದಕೃಷ್ಣ ಅಡ್ಯಂತಾಯ, ಕೆ.ಸಿ.ನಾಯಕ್, ಪ್ರೊ.ಎಂ.ಬಿ.ಪುರಾಣಿಕ್ ,ಸತೀಶ್ ಭಂಡಾರಿ ಬಿ.ಸಿ.ರೋಡು , ನಂದಾವರ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ಸೇರಿದಂತೆ  ಹಲವು ಗಣ್ಯರು ಆಗಮಿಸಿದ್ದರು.

ಒಂದೆಡೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯುತ್ತಿದ್ದರೆ ಮತ್ತೊಂದೆಡೆ ಬೃಹತ್ ವೇದಿಕೆಯಲ್ಲಿ ಸಾಂಸ್ಕೃತಿಕ ವೈಭವ ಮೇಳೈಸಿತು. ಮಧ್ಯಾಹ್ನ  2 ಗಂಟೆಗೆ ತೆಂಕು ಮತ್ತು ಬಡುಗುತಿಟ್ಟಿನ ಕಲಾವಿದರ ಕೂಡೂವಿಕೆಯಲ್ಲಿ ಯಕ್ಷ-ಗಾನ- ವೈಭವ, ಪ್ರಶಂಸ ತಂಡದ ಹಾಸ್ಯ, ಜಾನಪದ ಕಾರ್ಯಕ್ರಮಗಳ ಸಹಿತ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಭಕ್ತ ಸಮೂಹದ ಮನರಂಜಿಸಿತು.

ಧರ್ಮನೇಮ: ಶಾಸಕ ರಾಜೇಶ್ ನಾಯ್ಕ್ ಅವರ ಕುಟುಂಬದ ಧರ್ಮದೈವ ಶ್ರೀಕೊಡಮಣಿತ್ತಾಯನಿಗೆ ಒಡ್ಡೂರು ಫಾಮ್೯ ಹೌಸ್ ನಲ್ಲಿಯೇ  ನೂತನ ಧರ್ಮಚಾವಡಿ ನಿರ್ಮಿಸಿದ ಹಿನ್ನಲೆಯಲ್ಲಿ ಶನಿವಾರ ರಾತ್ರಿ ವೈಭವಪೂರ್ಣವಾದ ಧರ್ಮನೇಮವು ಸಂಪನ್ನಗೊಂಡಿತು.ಶಾಸಕರಾದ ಸುನೀಲ್ ಕುಮಾರ್ ಕಾರ್ಕಳ,ಹರೀಶ್ ಪೂಂಜಾ ಬೆಳ್ತಂಗಡಿ,ರಘುಪತಿಭಟ್ ಉಡುಪಿ,ಲಾಲಾಜಿ ಮೆಂಡನ್ ಕಾಪು ಸೇರಿದಂತೆ ಹಲವಾರು ಗಣ್ಯರು‌ ಭಾಗವಹಿಸಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts