ಫೆಬ್ರವರಿ 29ರಂದು ಮಂಗಳೂರು ತಾಲೂಕಿನ ಗಂಜೀಮಠ ಸಮೀಪ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಒಡ್ಡೂರು ಫಾರ್ಮ್ಸ್ ನಲ್ಲಿ ಶ್ರೀ ಕೊಡಮಣಿತ್ತಾಯ ಧರ್ಮದೈವಕ್ಕೆ ಧರ್ಮ ನೇಮೋತ್ಸವ, ಶತಚಂಡಿಕಾಯಾಗ ಕಾರ್ಯಕ್ರಮಗಳಿಗೆ ಪೂರ್ವಭಾವಿಯಾಗಿ ಧಾರ್ಮಿಕ ಕಾರ್ಯಕ್ರಮಗಳು ಫೆ.24ರಿಂದ ಪಲ್ಕೆ ವೇದಮೂರ್ತಿ ರತೀಶ್ ಭಟ್ ಹಾಗೂ ವೇದಮೂರ್ತಿ ಶ್ರೀ ವೆಂಕಟೇಶ ತಂತ್ರಿ ಎಡಪದವು ನೇತೃತ್ವದಲ್ಲಿ ಆರಂಭಗೊಂಡಿವೆ. ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಉಷಾ ಆರ್ ನಾಯ್ಕ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
24ರಂದು ಸಂಜೆ ಮಹಾಸುದರ್ಶನ ಯಾಗ ನಡೆದರೆ, ಮಂಗಳವಾರ ಗಣಪತಿಯಾಗ, ಸತ್ಯನಾರಾಯಣಪೂಜೆ, ಕೃಷ್ಣಮಂತ್ರ ಹೋಮ, ವಾಸ್ತುಪೂಜಾದಿ ಪ್ರಕ್ರಿಯೆಗಳು ನೆರವೇರಿದವು. 26ರಂದು ಪೂರ್ಣಮಾನ ನವಗ್ರಹಯಾಗ, ಮಂಟಪ ಸಂಸ್ಕಾರ ನಡೆಯಲಿದ್ದು, 27ರಂದು ಮೃತ್ಯುಂಜಯ ಯಾಗ, ಧರ್ಮಚಾವಡಿಯಲ್ಲಿ ನಾನಾ ಕಾರ್ಯಕ್ರಮಗಳು ನಡೆಯುವುದು. 28ರಂದು ಶುಕ್ರವಾರ ಬೆಳಗ್ಗೆ 8.04 ಮೀನ ಲಗ್ನ ಸುಮುಹೂರ್ತದಲ್ಲಿ ಧರ್ಮದೈವ ಪ್ರತಿಷ್ಠೆ, 108 ಕಲಶಾಧಿವಾಸ, ಪ್ರಧಾನ ಹೋಮ, ಸಾನಿಧ್ಯ ಕಲಶಾಧಿವಾಸ, ಪ್ರಧಾನ ಹೋಮ, ಸಾನಿಧ್ಯ ಕಲಶಾಭಿಷೇಕ, ಪರ್ವ ಸೇವೆ, ದರ್ಶನ, ಅನ್ನ ಸಂತರ್ಪಣೆ ದೇವಿ ಮಹಾತ್ಮ್ಯೆ ಪಾರಾಯಣ, ಯಾಗಕ್ಕೆ ಪೂರ್ವಭಾವಿ ತಯಾರಿ ನಡೆಯಲಿದೆ. ಇದೇ ವೇಳೆ 28ರ ಸೂರ್ಯೋದಯದಿಂದ ಮರುದಿನ ಸೂರ್ಯೋದಯದವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿವೆ. 29ರಂದು ಬೆಳಗ್ಗೆ 6ರಿಂದ ಶತಚಂಡಿಕಾಯಾಗ, 11 ಗಂಟೆಗೆ ಪೂರ್ಣಾಹುತಿ, 11.30ಕ್ಕೆ ಕೊಡಮಣಿತ್ತಾಯ ದೈವದ ಭಂಡಾರ ಏರುವುದು, ಮಧ್ಯಾಹ್ನ ಅನ್ನಸಂತರ್ಪಣೆ, ಮಧ್ಯಾಹ್ನ 2ರಿಂದ ರಾತ್ರಿ 9ರವರೆಗೆ ನಿರಂತರ ಸಾಂಸ್ಕೃತಿಕ ವೈಭವ, ರಾತ್ರಿ 9ರಿಂದ ಕೊಡಮಣಿತ್ತಾಯ ಧರ್ಮ ದೈವಕ್ಕೆ ಧರ್ಮ ನೇಮೋತ್ಸವ ನಡೆಯಲಿದೆ.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127