ವಿಟ್ಲ

ಒಡಿಯೂರಿನಲ್ಲಿ 2 ದಿನಗಳ ತುಳು ಕಾವ್ಯ ರಚನಾ ಕಮ್ಮಟ

ಒಡಿಯೂರು: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಒಡಿಯೂರ್‍ದ ತುಳುಕೂಟದ ಸಹಕಾರದೊಂದಿಗೆ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ಎಪ್ರಿಲ್ 11  ಮತ್ತು 12ರ ಶನಿವಾರ ಮತ್ತು ಆದಿತ್ಯವಾರ ಎರಡು ದಿನಗಳ ತುಳು ಕಾವ್ಯ ರಚನಾ ಕಮ್ಮಟ(ತುಳು ಕಬಿತೆ ಕಟ್ಟುನ ಕಜ್ಜಕೊಟ್ಯ)ವನ್ನು ಏರ್ಪಡಿಸಲಾಗಿದೆ.

ಜಾಹೀರಾತು

ಹಿರಿಯ ಕವಿ-ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರು ಶಿಬಿರದ ನಿರ್ದೇಶಕರಾಗಿದ್ದು, ತಜ್ಞರು ವಿಷಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿರುವರು.

ಕಾವ್ಯ ರಚನೆಯಲ್ಲಿ ಆಸಕ್ತರಾಗಿರುವ ಯುವಕ-ಯುವತಿಯರು ತಮ್ಮ ಪೂರ್ಣ ಅಂಚೆ ವಿಳಾಸ, ದೂರವಾಣಿ ಸಂಖ್ಯೆ, ಕೃತಿ ರಚನೆಯ ವಿವರಗಳನ್ನೊಳಗೊಂಡ ಅರ್ಜಿಯನ್ನು ಮಾರ್ಚ್ 31 ರೊಳಗೆ ನಿರ್ದೇಶಕರು, ತುಳು ಕಾವ್ಯ ರಚನಾ ಕಮ್ಮಟ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್, ಒಡಿಯೂರು-574242, ಬಂಟ್ವಾಳ ತಾಲೂಕು, ದ.ಕ. ಇಲ್ಲಿಗೆ ಬರೆದು ನೋಂದಾಯಿಸಲು ಕೋರಿದೆ

ಅಥವಾ ಇಮೇಲ್: info@shreeodiyoor.org ಗೆ ಕಳುಹಿಸಿಕೊಡಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 08255-266282/266211 ಮೊಬೈಲ್: 9448177811 ನ್ನು ಸಂಪರ್ಕಿಸಬಹುದು. ಸೀಮಿತ ಪ್ರವೇಶಾವಕಾಶ ಇರುವುದರಿಂದ ಅರ್ಜಿಗಳನ್ನು ಆದಷ್ಟು ಶೀಘ್ರ ಕಳುಹಿಸಿಕೊಡುವಂತೆ ಸೂಚಿಸಿದೆ. ಆಯ್ಕೆಯಾದವರಿಗೆ ಒಡಿಯೂರಿಗೆ ಬಂದು ಹೋಗುವ ಸಾಮಾನ್ಯ ಪ್ರಯಾಣ ವೆಚ್ಚ ನೀಡಲಾಗುವುದು. ಕಮ್ಮಟದಲ್ಲಿ ರಚನೆಯಾದ ಕವನಗಳು ಅನಂತರ ಕೃತಿರೂಪದಲ್ಲಿ ಪ್ರಕಟವಾಗಲಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts