ಬಂಟ್ವಾಳ

ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬೆಳ್ಳಿಹಬ್ಬ ಸಂಭ್ರಮ, 26, 27ರಂದು ಕಾರ್ಯಕ್ರಮ

ಮಣಿನಾಲ್ಕೂರು ಗ್ರಾಮದ ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬೆಳ್ಳಿಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಏಕಾಹ ಭಜನೆ ಹಾಗೂ 16ನೇ ವರ್ಷದ ಯಕ್ಷಗಾನ ಬಯಲಾಟ ಕಾರ್ಯಕ್ರಮವು ಫೆ. 26 ಮತ್ತು 27ರಂದು ಜರಗಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ದೇಜಪ್ಪ ಬಾಚಕೆರೆ ತಿಳಿಸಿದರು.

ಶನಿವಾರ ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕ್ಷೇತ್ರದ ೨೫ನೇ ವಾರ್ಷಿಕೋತ್ಸವದ ಅಂಗವಾಗಿ ಫೆ. ೨೬ರ ಬೆಳಗ್ಗೆ ಸೂರ್ಯೋದಯದಿಂದ ಮರುದಿನ ಸೂರ್ಯೋದಯದವರೆಗೆ ಏಕಾಹ ಭಜನೆ ನಡೆಯಲಿದ್ದು, ಕಾಸರಗೋಡು ಸೇರಿದಂತೆ ಜಿಲ್ಲೆಯ ಸುಮಾರು ೧೮ ತಂಡಗಳು ಭಜನೆಯಲ್ಲಿ ಪಾಲ್ಗೊಳ್ಳಲಿವೆ. ಬೆಳಗ್ಗೆ ೬.೫೦ಕ್ಕೆ ಕಟೀಲು ಕ್ಷೇತ್ರದ ಕಮಲಾದೇವಿಪ್ರಸಾದ ಅಸ್ರಣ್ಣ ಅವರ ಉಪಸ್ಥಿತಿಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ನ್ಯಾಯವಾದಿ ಜಯರಾಮ ರೈ ವಿಟ್ಲ, ತಾ.ಪಂ.ಮಾಜಿ ಸದಸ್ಯ ಸಂಪತ್‌ಕುಮಾರ್ ಶೆಟ್ಟಿ ಮುಂಡ್ರೇಲುಗುತ್ತು, ಕೃಷಿಕ ಸುರೇಶ್ ಶೆಟ್ಟಿ ಮಿಯಾರು, ಶ್ರೀ ಭ್ರಮರಾಂಬಿಕಾ ಸೇವಾ ಸಂಘದ ಅಧ್ಯಕ್ಷ ಓಬಯ ಕಜೆಕ್ಕಾರು, ಅಗರಗಂಡಿ ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂಡಳಿಯ ಅಧ್ಯಕ್ಷ ಲಕ್ಷೀ÷್ಮನಾರಾಯಣ ನೇಲ್ಯಪಲ್ಕೆ ಅವರ ಸಮ್ಮುಖದಲ್ಲಿ ಭಜನೆ ಪ್ರಾರಂಭಗೊಳ್ಳಲಿದೆ. ಫೆ. ೨೭ರಂದು ಬೆಳಗ್ಗೆ ತೋರಣ ಮುಹೂರ್ತ, ಗಣಹೋಮ, ಶ್ರೀ ದೇವಿಗೆ ೧೦೧ ಸೀಯಾಳಾಭಿಷೇಕ, ಯಕ್ಷ ಭಜನಾ ಸಂಕೀರ್ತನೆ, ಮಧ್ಯಾಹ್ನ ಶ್ರೀ ದೇವಿಗೆ ಹೂವಿನ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಭಜನೆ, ರಾತ್ರಿ ದುರ್ಗಾ ನಮಸ್ಕಾರ ಪೂಜೆ, ಬಳಿಕ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದ ಪದಾಧಿಕಾರಿಗಳಾದ ರಾಧಾಕೃಷ್ಣ ರೈ ಮಾವಿನಕಟ್ಟೆ, ಎಲ್.ಕೆ.ಧರಣ್, ರಾಜೇಶ್ ಬೊಳ್ಳುಕಲ್ಲು, ಓಬಯ ಕಜೆಕಾರು, ಲಕ್ಷೀನಾರಾಯಣ ನೇಲ್ಯಪಲ್ಕೆ, ಸುಂದರ ಬಾಚಕೆರೆ, ಪುರುಷೋತ್ತಮ ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ