ಮಾತೃ ಬಾಷೆಯ ಬೆಳವಣಿಗೆಯಿಂದ ನಮ್ಮ ಸಂಸ್ಕೃತಿ ಮತ್ತು ಭಾಷಾ ಬೆಳವಣಿಗೆಯು ವೃದ್ಧಿಯಾಗುವುದು. ಮಾತೃ ಭಾಷೆಯ ಆಚರಣೆ ಮತ್ತು ಬಳಕೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯ ನಿರಂತರ ಬೆಳಗುತ್ತಾ ಇರಬೇಕು ಎಂದು ಶ್ರೀರಾಮ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಅಶೋಕ್ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.
ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ಪ್ರಜ್ಞಾನ ಸಾಹಿತ್ಯ ಸಂಘ ಏರ್ಪಡಿಸಿದ ‘ಮಾತೃ ಭಾಷಾ ದಿವಸ್’ ಎಂಬ ಕಾರ್ಯಕ್ರಮದಲ್ಲಿ ಅವರು ಆಂಗ್ಲ ಭಾಷೆಯ ವ್ಯಾಮೋಹದ ಪ್ರತಿಷ್ಠೆಯಿಂದ ಮಾತೃ ಭಾಷೆಯು ಮೂಲೆಗುಂಪಾಗಿರುವುದು ವಿಪರ್ಯಾಸ. ಆದರೆ ದಿನಬಳಕೆಯಲ್ಲಿ ಮಾತೃ ಭಾಷೆಯು ಹೆಬ್ಬಾಗಿಲಿನಂತೆಯೂ, ಇತರ ಭಾಷೆಯು ಗಾಳಿ ಬೆಳಕಿಗಾಗಿ ಕಿಟಕಿಯನ್ನು ತೆರೆದಿಡುವಂತೆಯೇ ಬಳಸಬೇಕು ಎಂದರು. ಅಧ್ಯಕ್ಷತೆಯನ್ನು ಶ್ರೀರಾಮ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ವಸಂತ ಬಲ್ಲಾಳ್ ವಹಿಸಿದ್ದರು. ಪದವಿ ಕಾಲೇಜಿನ ಪ್ರಿನ್ಸಿಪಾಲ್ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಉಪಸ್ಥಿತರಿದ್ದರು. ಅಂತಿಮ ಬಿಕಾಂ ವಿದ್ಯಾರ್ಥಿನಿಯರಾದ ಹೇಮಲತಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಸುಭಾಷಿಣಿ ವಂದಿಸಿದರು.