ಬಂಟ್ವಾಳದ ಚೆಂಡ್ತಿಮಾರ್ ನ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಹಾಗೂ ಆದಿದ್ರಾವಿಡ ಸುಧಾರಕ ಸಂಘ ವತಿಯಿಂದ 59ನೇ ವರ್ಷದ ಮಹಾಶಿವರಾತ್ರಿ ಭಜನೋತ್ಸವ, ನೇಮೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಚೆಂಡ್ತಿಮಾರ್ ನಲ್ಲಿ ನಡೆಯಲಿವೆ ಎಂದು ಅಧ್ಯಕ್ಷ ಜನಾರ್ದನ ಚೆಂಡ್ತಿಮಾರ್ ತಿಳಿಸಿದ್ದಾರೆ.
20ರಂದು ಸಂಜೆ 6ಕ್ಕೆ ಸಭಾ ಕಾರ್ಯಕ್ರಮ ಇರಲಿದ್ದು, ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ, ತಹಸೀಲ್ದಾರ್ ರಶ್ಮಿ ಎಸ್.ಆರ್. ಮತ್ತಿತರರು ಭಾಗವಹಿಸುವರು. 21ರಂದು ಸಂಜೆ 6.30ಕ್ಕೆ ಭಜನೆ, ವಿವಿಧ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ರಾತ್ರಿ 12ಕ್ಕೆ ಮಹಾಪೂಜೆ, ಸೂರ್ಯೋದಯಕ್ಕೆ ಮಹಾಮಂಗಲೋತ್ಸವ, 22ರಂದು ಶನಿವಾರ ಸತ್ಯಪದ್ನಾಜಿ ಸಾರ ಮುಪ್ಯಣ್ಣ ಹಾಗೂ ಅಲೆರ ಪಂಜುರ್ಲಿ ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…