ದುರ್ಬಲ ಮನಸ್ಥಿತಿಯ ವ್ಯಕ್ತಿ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಾನೆ. ಪ್ರಾಣಿಗಿಂತ ಕಡೆಯಾಗಿ ಹೋಗುತ್ತಾನೆ. ದೃಢವಾದ ಮನಸ್ಸು ಇದ್ದರೆ ಯಾವುದೇ ದುಶ್ಚಟಗಳಿಗೆ ವ್ಯಕ್ತಿ ಬಲಿಯಾಗುವುದಿಲ್ಲ. ಇಂದು ಮೆಹಂದಿ ಕಾರ್ಯಕ್ರಮ ಗಳು ಮದ್ಯವ್ಯಸನಿಗಳನ್ನು ಸೃಷ್ಟಿಸುವ ಕಾರ್ಯಕ್ರಮ ಗಳಾಗುತ್ತಿರುವುದು ದುರಂತ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯ ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ಕೊಡಾಜೆ ಹೇಳಿದರು.
ರೋಟರಿ ಕ್ಲಬ್ ಬಂಟ್ವಾಳ ಟೌನ್ ನ ರೋಟರಿ ಆ್ಯನ್ಸ್ ಕ್ಲಬ್ ಮತ್ತು ಇಂಟಾರ್ಯಾಕ್ಟ್ ಕ್ಲಬ್ ಗಳು ಶಂಭೂರಿನ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮಾದಕ ವ್ಯಸನಗಳ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತಾನಾಡುತ್ತಿದ್ದರು.
ಶಾಲಾ ಮುಖ್ಯಶಿಕ್ಷಕ ಕಮಲಾಕ್ಷ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಟೌನ್ ನಿಯೋಜಿತ ಅಧ್ಯಕ್ಷರಾದ ಪದ್ಮನಾಭ ರೈ ಕಾರ್ಯಕ್ರಮ ಉದ್ಘಾಟಿಸಿದರು. ರೋಟರಿ ಟೌನ್ ನಿಯೋಜಿತ ಕಾರ್ಯದರ್ಶಿ ಕಿಶೋರ್ , ಹಿರಿಯ ಶಿಕ್ಷಕಿ ಸುಜಾತ ಉಪಸ್ಥಿತರಿದ್ದರು. ರೋಟರಿಯ ಆ್ಯನ್ಸ್ ಅಧ್ಯಕ್ಷೆ ವಿಂದ್ಯಾ ಎಸ್ ರೈ ಸ್ವಾಗತಿಸಿದರು. ಇಂಟಾರ್ಯಾಕ್ಟ್ ಅಧ್ಯಕ್ಷೆ ಶ್ರೀ ಲಕ್ಷ್ಮೀ ವಂದಿಸಿದರು. ಇಂಟಾರ್ಯಾಕ್ಟ್ ಮಾರ್ಗದರ್ಶಿ ಶಿಕ್ಷಕ ಹರಿಪ್ರಸಾದ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ವಸಂತಿ, ವರಮಹಾಲಕ್ಷ್ಮೀ, ಭಾರತಿ, ಸದಾಶಿವ ನಾಯಕ್, ಪ್ರಕಾಶ್, ಹರೀಶ್ ಸಹಕರಿಸಿದರು.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…