ನಿಲ್ಲಿಸಿ ತೊಳೆಯುತ್ತಿದ್ದ ಸಂದರ್ಭ ಬಸ್ ತಾಂತ್ರಿಕ ಸಮಸ್ಯೆಯಿಂದ ದಿಢೀರನೆ ಚಲಿಸಿ ಚರಂಡಿಗೆ ವಾಲಿ ನಿಂತ ಘಟನೆ ವಿಟ್ಲದ ಬಾಕಿಬಾರ್ ಪೆಟ್ರೋಲ್ ಪಂಪ್ ನಲ್ಲಿ ಶನಿವಾರ ರಾತ್ರಿ ನಡೆಯಿತು. ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.
ವಿಟ್ಲದ ಕಾಸರಗೋಡು ರಸ್ತೆಯ ಪೆಟ್ರೋಲ್ ಪಂಪ್ ನಲ್ಲಿ ಎಂದಿನಂತೆ ಬಸ್ಸನ್ನು ನಿಲ್ಲಿಸಿ ನಿರ್ವಾಹಕ ತೊಳೆಯುತ್ತಿದ್ದ ವೇಳೆ ನ್ಯೂಟ್ರಲ್ ನಲ್ಲಿ ಬಸ್ ನೇರವಾಗಿ ರಸ್ತೆಯನ್ನು ದಾಟಿ ಪಕ್ಕದ ಚರಂಡಿಗೆ ವಾಲಿ ನಿಂತಿದೆ. ಬಸ್ ರಸ್ತೆ ಮಧ್ಯದಲ್ಲಿ ಅಡ್ಡವಾಗಿ ನಿಂತ ಪರಿಣಾಮ ಕಾಸರಗೋಡು ರಸ್ತೆಯಲ್ಲಿ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿತು. ಬಳಿಕ ವಿಟ್ಲ ಪೊಲೀಸರು ಭೇಟಿ ನೀಡಿ ವಾಹನ ಸಂಚಾರ ನಿಯಂತ್ರಿಸಿದರು.