ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ಆರಾಧನಾ ಫ್ರೆಂಡ್ಸ್ ಸರ್ಕಲ್ ವತಿಯಿಂದ ೩೨ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಯಕ್ಷಗಾನ ಬಯಲಾಟ ಮತ್ತು ಸನ್ಮಾನ ಸಮಾರಂಭ ನಡೆಯಿತು.
ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಶಶಿಪ್ರಭಾ ಪರಿಣಯ ಹಾಗೂ ಮಾಯಾ ಮಾರುತೇಯ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಿತು.
ದಿ. ಲಕ್ಷ್ಮೀ ಅಮ್ಮ ದಿ. ಕೆ ಮರಿಯಪ್ಪಯ್ಯ ಹೊಳ್ಳ ಕಳ್ಳಿಮಾರು ಸ್ಮರಣಾರ್ಥ ಅವರ ಮಕ್ಕಳು ನೀಡುವ ಆರಾಧನಾ ಪ್ರಶಸ್ತಿ ೨೦೨೦ನ್ನು ಈ ಸಂದರ್ಭ ಹಿರಿಯ ಅರ್ಥಧಾರಿ ನಾಟಿ ಕೃಷ್ಣರಾಜ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು. ೨೦೧೮-೧೯ನೆ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಯಲ್ಲಿ ಪ್ರತಿಶತ ೯೪ ಅಂಕ ಗಳಿಸಿದ ಪ್ರತೀಕ್ಷಾ ಕುಮಾರಿ ಪೂಂಜೆರೆಕೋಡಿ ಅವರಿಗೆ ಪ್ರತಿಭಾಪುರಸ್ಕಾರ ನೀಡಿ ಅಭಿನಂದಿಸಲಾಯಿತು ನಿವೃತ್ತ ಪ್ರೊಫೆಸರ್ ಡಾ: ಶಿವರಾಮ ಹೊಳ್ಳ, ನಿವೃತ್ತ ಸೇನಾ ಯೋಧ ಗಣಪತಿ ಸೋಮಯಾಜಿ, ಆರಾಧನಾ ಫ್ರೆಂಡ್ಸ್ ಸರ್ಕಲ್, ಪದಾಕಾರಿಗಳು ಉಪಸ್ಥಿತರಿದ್ದರು ನಿವೃತ್ತ ಮುಖ್ಯೋಪಾಧ್ಯಾಯ ಪರಮೇಶ್ವರ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…