ಬಂಟ್ವಾಳ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಕಾರಿಂಜದ ಕೆರೆಗೆ ಭಾನುವಾರ ರಾತ್ರಿ ಸ್ನಾನಕ್ಕೆಂದು ಇಳಿದ ಯುವಕ ಮೃತಪಟ್ಟಿದ್ದಾರೆ.
ಕಡ್ತಲಬೆಟ್ಟು ನಿವಾಸಿ ಸೇಸಪ್ಪ ಮಡಿವಾಳ ಎಂಬವರ ದ್ವಿತೀಯ ಪುತ್ರ ಸುಕೇಶ್ (25) ಮೃತಪಟ್ಟ ಯುವಕ. ಇವರು ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ತನ್ನಿಬ್ಬರು ಸ್ನೇಹಿತರೊಂದಿಗೆ ರಜಾ ಹಿನ್ನೆಲೆಯಲ್ಲಿ ಕಾರಿಂಜ ಕ್ಷೇತ್ರಕ್ಕೆ ಸಂಜೆ ಆಗಮಿಸಿದ್ದರು. ಈ ಸಂದರ್ಭ ಸ್ನಾನಕ್ಕಿಳಿದ ವೇಳೆ ಕೆರೆಯ ಆಳ ತಿಳಿಯದೆ ಮುಳುಗಿ ಸಾವನ್ನಪ್ಪಿದ್ದು, ಸ್ನೇಹಿತರು ಬೊಬ್ಬೆ ಹೊಡೆದಾಗ ಸ್ಥಳೀಯರು ಕೂಡಲೇ ಅಗ್ನಿಶಾಮಕದಳ, ಪೊಲೀಸರನ್ನು ಕರೆಯಿಸಿದ್ದಾರೆ. ರಾತ್ರಿ ಸುಮಾರು 8.30ರ ಆಸುಪಾಸಿಗೆ ಮೃತದೇಹ ದೊರಕಿದೆ. ಪುಂಜಾಲಕಟ್ಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…