ಬಂಟ್ವಾಳದ ಟೀಮ್ ಗ್ಲೆಡಿಯೇಟರ್ಸ್‌ನ ಪ್ರಾಯೋಜಕತ್ವದಲ್ಲಿ ಭಾನುವಾರ ಬಿ.ಸಿ.ರೋಡಿನ ಬಸ್ತಿಪಡ್ಪು ಮೈದಾನದಲ್ಲಿ ನಡೆದ ಆಟೋಕ್ರಾಸ್-2020 ಬಕ್ ರೇಸ್‌ನಲ್ಲಿ ಸ್ಪರ್ಧಿಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು.
ಚಿತ್ರಕೃಪೆ: ಕಿಶೋರ್ ಪೆರಾಜೆ
ರಾಜ್ಯದ ಬೆಂಗಳೂರು, ಮೈಸೂರು, ಹಾಸನ, ಚಿಕ್ಕಮಂಗಳೂರು, ಮಂಗಳೂರು ಸೇರಿದಂತೆ ಕೇರಳದಿಂದಲೂ ಸ್ಪರ್ಧಿಗಳು ಆಗಮಿಸಿದ್ದರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127
೨ ಸ್ಟ್ರೋಕ್, ೪ ಸ್ಟ್ರೋಕ್, ಇಂಡಿಯನ್ ಓಪನ್, ಓಪನ್ ಕ್ಲಬ್ ಕ್ಲಾಸ್, ಎಕ್ಸ್‌ಪರ್ಟ್ ಕ್ಲಾಸ್, ನೋವೀಸ್, ಸ್ಥಳೀಯ ವಿಭಾಗ ಮತ್ತು ಬೆಸ್ಟ್ ರೈಡರ್ ಹೀಗೆ ಎಂಟು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.
ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್ ಡಿಸೋಜಾ ರೇಸ್‌ಗೆ ಚಾಲನೆ ನೀಡಿ ಶುಭ ಹಾರೈಸಿದರು. ಪ್ರಮುಖರಾದ ಅಶ್ವನಿ ಕುಮಾರ್ ರೈ, ಪಿಯೂಸ್ ಎಲ್.ರಾಡ್ರಿಗಸ್, ಶ್ರೀನಿವಾಸ ಪೂಜಾರಿ ಮೆಲ್ಕಾರ್, ಮಹಮ್ಮದ್ ವಳವೂರು, ಅರುಣ್ ಮಾಡ್ತ, ಸುಕುಮಾರ್ ಬಂಟ್ವಾಳ್, ಶಿವಪ್ರಸಾದ್ ಬಂಟ್ವಾಳ, ಸುದರ್ಶನ್, ಮೊನೀಶ್ ಆಲಿ, ಜಯರಾಜ್, ಸತೀಶ್ ಬಿ.ಸಿ.ರೋಡು, ಎಲ್ಸನ್ ಮಿನೇಜಸ್, ಟೀಮ್‌ನ ಎಲ್ಸನ್ ಲಾಡ್ ಮೆನೇಜಸ್, ನವೀನ್‌ಕುಮಾರ್ ಮೈರಾನ್‌ಪಾದೆ, ಉದಯಕುಮಾರ್ ವಗ್ಗ, ಪ್ರಸಾದ್ ಮರ್ದೋಳಿ, ವಿಜಯ ಪಾಯಿಸ್ ಅಲ್ಲಿಪಾದೆ, ಸದಾನಂದ, ಸ್ನೇಕ್ ಕಿರಣ್, ಅಝೀಝ್ ವಗ್ಗ ಮೊದಲಾದವರು ಇದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…