ಬಂಟ್ವಾಳ

ಭೂತದ ಕೋಲಕ್ಕೆ ಕರೀತಿರಿ, ಕೆಲಸ ಆಗ್ಲಿಲ್ಲ ಎಂದು ಹೇಳ್ತೀರಿ

  • ಜನಪ್ರತಿನಿಧಿಗಳ ಸಂದಿಗ್ಧತೆ – ಮತದಾರರ ಅಭಿಮಾನ ತೆರೆದಿಟ್ಟ ವಿದ್ಯಾರ್ಥಿಗಳ ಪ್ರಶ್ನಾವಳಿ

ಜನಪ್ರತಿನಿಧಿಗಳು ತಮಗೆ ಒದಗಿಸಿದ ಅನುದಾನವನ್ನು ಸದ್ಬಳಕೆ ಮಾಡುವುದು ಹೇಗೆ ಎಂಬುದನ್ನು ಚಿಂತಿಸಲು ಸಮಯವೆಲ್ಲಿದೆ? ಜನರಿಗೆ ಅವರು ತಮ್ಮ ಮನೆಯಲ್ಲಿ ನಡೆಯುವ ಭೂತದ ಕೋಲ, ಸತ್ಯನಾರಾಯಣ ಪೂಜೆಗೂ ಬರಬೇಕು ಎಂಬ ಆಸೆ. ಇಡೀ ದಿನ ಜನಪ್ರತಿನಿಧಿಗಳು ತಾವು ಮಾಡಬೇಕಾದ ಕೆಲಸಗಳನ್ನು ಬದಿಗಿಟ್ಟು, ಮತದಾರರು ಆಸೆಪಡುತ್ತಾರೆಂದು ತಿರುಗಾಟ ಮಾಡಿದರೆ, ನಾಳೆಯೇ ಕೆಲಸ ಮಾಡಿಕೊಡುವುದು ಹೇಗೆ?

www.bantwalnews.com Editor: Harish Mambady

ಜಾಹೀರಾತು

ಜನಪ್ರತಿನಿಧಿಗಳು ದಿನನಿತ್ಯ ಅನುಭವ ಹಾಗೂ ಮತದಾರರ ಒತ್ತಾಯಕ್ಕೆ ಕಟ್ಟುಬೀಳುವ ಸಂದಿಗ್ಧತೆ ಹಾಗೂ ಮತದಾರರ ಅಭಿಮಾನ ಹಾಗೂ ಜನಪ್ರತಿನಿಧಿಗಳಿಂದ ಕೂಡಲೇ ಕೆಲಸವಾಗಬೇಕು ಎಂದು ಬಯಸುವ ಪ್ರವೃತ್ತಿಯನ್ನು ತೆರೆದಿಟ್ಟದ್ದು ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಸಂವಾದ ಕಾರ್ಯಕ್ರಮ

ಅಂತರಾಷ್ಟ್ರೀಯ  ಲಯನ್ಸ್ ಸೇವಾ ಸಂಸ್ಥೆ ಆಶ್ರಯದಲ್ಲಿ ಯುವವಾಹಿನಿ ಬಂಟ್ವಾಳ ತಾಲೂಕು ಘಟಕ ಹಾಗೂ ಲಯನ್ಸ್ ಕ್ಲಬ್ ಬಂಟ್ವಾಳದ ಆತಿಥ್ಯದಲ್ಲಿ “ತ್ರಿನೇತ್ರ- ನಾಳೆಗಳ ಭರವಸೆ ಕಣ್ಣುಗಳು”  ಎನ್ನುವ  ಕಾನೂನು, ರಾಜಕೀಯ, ಮನಶಾಸ್ತ್ರ ತಜ್ಞರೊಂದಿಗೆ ನೇರಾ ಸಂವಾದ ಕಾರ್ಯಕ್ರಮ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು 925 ವಿದ್ಯಾರ್ಥಿಗಳು 21 ಕಾಲೇಜುಗಳಿಂದ ಭಾಗವಹಿಸಿದರು.

ರಾಜಕೀಯ, ಕಾನೂನು ಮತ್ತು ಮನಶಾಸ್ತ್ರಕ್ಕೆ ಸಂಬಂಧಿಸಿದ ಸಂವಾದ ಕಾರ್ಯಕ್ರಮದಲ್ಲಿ ರಾಜಕೀಯ ವಿಚಾರಕ್ಕೆ ಪ್ರಶ್ನೆಗಳು ಜಾಸ್ತಿ ಬಂದವು. ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ರಾಜಕೀಯ ಪ್ಯಾನೆಲಿಸ್ಟ್ ಗಳಾದ ಪ್ರತಾಪ್ ಸಿಂಹ ನಾಯಕ್ ಮತ್ತು ಪ್ರತಿಭಾ ಕುಳಾಯಿ ರಾಜಕಾರಣಿಗಳ ಅರ್ಹತೆ, ಜನರು ಬಯಸುವ ದಕ್ಷತೆ ಕುರಿತು ಮಾತನಾಡಿದರು.

ಕಾನೂನು ಕ್ಷೇತ್ರದ ಬಗ್ಗೆ ನ್ಯಾ. ಸಂತೋಷ್ ಹೆಗ್ಡೆ, ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವೆಲೆಂಟೀನ್ ಡಿಸೋಜಾ, ರಾಜಕೀಯ ಕ್ಷೇತ್ರದ ಬಗ್ಗೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ   ಪ್ರತಾಪ್ ಸಿಂಹ ನಾಯಕ್, ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ, ಮನಃಶಾಸ್ತ್ರದ ಬಗ್ಗೆ ಮಕ್ಕಳ ಮತ್ತು ಹದಿಹರೆಯದ ಮಾನಸಿಕ ಆರೋಗ್ಯ ತಜ್ಞೆ ರಮೀಳಾ ಶೇಖರ್ ,  ಮನೋವೈದ್ಯ  ಡಾ. ರವೀಶ್ ತುಂಗ ಭಾಗವಹಿಸಿದ್ದರು. ಲಯನ್ಸ್ ಸಂಸ್ಥೆಯ ಸಂಪುಟ ಕಾರ್ಯದರ್ಶಿ ವಿಜಯ ವಿಷ್ಣು ಮಯ್ಯ ಸಮನ್ವಯಕಾರರಾಗಿ ಭಾಗವಹಿಸಿದ್ದರು. ಸುಮಾರು ೭೦೦ಕ್ಕಿಂತಲೂ ಅಧಿಕ ಮಂದಿ ವಿದ್ಯಾರ್ಥಿಗಳು ಮುಖಾಮುಖಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮೌಲ್ಯಗಳು ಹೇಗೆ ಉಳಿಯುತ್ತವೆ:

ಇಂದು ವ್ಯರ್ಥವಾಗುವ ಲೋಕಸಭೆ ಕಲಾಪಕ್ಕೆ ದಿನವೊಂದಕ್ಕೆ ೧೦ ಕೋಟಿಯಷ್ಟು ಖರ್ಚಾಗುತ್ತದೆ, ಯುಪಿ ಸರಕಾರ ವಿಧಾನಸಭಾ ಸದಸ್ಯರ ಆದಾಯ ತೆರಿಗೆಯನ್ನೇ ಕಟ್ಟಿದೆ, ಎಂಎಲ್‌ಎಗಳು ಎಸ್ಸೈಗಳ ವರ್ಗಾವಣೆ ಬಯಸುತ್ತಾರೆ. ಹೀಗಿದ್ದರೆ ಮೌಲ್ಯಗಳು ಎಲ್ಲಿ ಉಳಿಯುತ್ತವೆ ಎಂದು ಕಾನೂನು ವಿಚಾರ ಹಾಗೂ ಪ್ರಸಕ್ತ ವಿದ್ಯಮಾನಗಳ ಕುರಿತು ಮಾತನಾಡಿದ ನಿವೃತ್ತ ಲೋಕಾಯುಕ್ತ ಜ.ಎನ್.ಸಂತೋಷ್ ಹೆಗ್ಡೆ ಪ್ರಶ್ನಿಸಿದರು.

ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ

ಭ್ರಷ್ಟಾಚಾರವನ್ನು ನಿಯಂತ್ರಿಸಬಹುದು ಆದರೆ ನಿರ್ಮೂಲನೆ ಅಸಾಧ್ಯ ಎಂದು ಎನ್.ಸಂತೋಷ್ ಹೆಗ್ಡೆ ಹೇಳಿದರು. ನಾನು ಚಿಕ್ಕವನಿದ್ದಾಗ ಜೈಲಿಗೆ ಹೋದವನನ್ನು ಬಹಿಷ್ಕರಿಸಲಾಗುತ್ತಿತ್ತು. ಆದರೆ ಇಂದು ಅವರಿಗೆ ಹೂಹಾರ ಹಾಕುವ ಸಮಾಜ ಇದೆ. ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸವನ್ನು ಯುವಜನತೆ ಮಆಡಬೇಕು. ತೃಪ್ತಿ ಇರಲಿ, ದುರಾಸೆ ಬೇಡ, ಮಾನವೀಯತೆ ಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂತೋಷ್ ಹೆಗ್ಡೆ, ಶಾಲೆಗಳಲ್ಲಿ ಮೌಲ್ಯಗಳ ಬಗ್ಗೆ ವಿಷಯಗಳಿರುವುದಿಲ್ಲ. ವಸ್ತುಗಳ ಅನ್ವೇಷಣೆ ಹೇಗೆ ಮಾಡುವುದು ಎನ್ನುವುದನ್ನು ಶಾಲೆಗಳಲ್ಲಿ ತಿಳಿಸಿಕೊಡುತ್ತಾರೆ ಆದರೆ ಅದನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ತಿಳಿಸಿಕೊಡುವುದಿಲ್ಲ ಎಂದರು.

ಲಯನ್ಸ್ ಕ್ಲಬ್‌ನ ರಾಜ್ಯಪಾಲ ರೊನಾಲ್ಡ್ ಐಸಕ್ ಗೋಮ್ಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ಧೈರ್ಯ, ದೃಢತೆ, ಸಾಧಿಸುವ ಛಲ ಇದ್ದಾಗ ನಾವು ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಿದೆ ಎಂದರು.

ಮುಖ್ಯ ಅತಿಥಿಗಳಾಗಿ ಅನಿತಾ ರೋನಾಲ್ಡ್ ಗೋಮ್ಸ್ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು, ಲಯನ್ಸ್ ಕ್ಲಬ್‌ನ ಪ್ರಥಮ ಉಪ ರಾಜ್ಯಪಾಲ ಗೀತ್ ಪ್ರಕಾಶ್ ದ್ವಿತೀಯ ಉಪರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ  ಇಂದಿರೇಶ್ ಬಿ. ಉಪಸ್ಥಿತರಿದ್ದರು.  ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ  ಪೂಜಾರಿ ಸ್ವಾಗತಿಸಿದರು. ಸಂಚಾಲಕ ಚೇತನ್ ಮುಂಡಾಜೆ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts