ವಿಟ್ಲ

ಒಡಿಯೂರಿನಲ್ಲಿ ತುಳುನಾಡ ಜಾತ್ರೆ, ತುಳು ಸಾಹಿತ್ಯ ಸಮ್ಮೇಳನೊ

ಸೋಮವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ವತಿಯಿಂದ ಶ್ರೀ ಒಡಿಯೂರು ರಥೋತ್ಸವ- ತುಳುನಾಡ ಜಾತ್ರೆ ಪ್ರಯುಕ್ತ ನಡೆದ ಇಪ್ಪತ್ತನೇ ತುಳು ಸಾಹಿತ್ಯ ಸಮ್ಮೇಳನ ಭಾಷೆಯ ಬೆಳವಣಿಗೆ, ಪ್ರಸ್ತುತ ಸನ್ನಿವೇಶಗಳ ಕುರಿತು ಬೆಳಕು ಚೆಲ್ಲಿತು.

ಉದ್ಘಾಟನಾ ಕಾರ್ಯಕ್ರಮ:

ಮನೆ ಮನೆಗಳಲ್ಲಿ ತುಳು ಭಾಷೆ ಮಾತನಾಡುವ ಮೂಲಕ ತುಳು ಮಾತೆಯ ಉತ್ಸವ ನಡೆಯಬೇಕು. ತುಳುವರಲ್ಲಿ ಎದ್ದೇಳುವ ಪ್ರವೃತ್ತಿಯ ಕೊರತೆ ಇದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಮಲಾರ್ ಜಯರಾಮ ರೈ ಅವರ ಸಂಪಾದಕತ್ವದಲ್ಲಿ ರಚಿಸಲಾದ ಅವಧೂತ ಪಜ್ಜೆಲು ಪುಸ್ತಕ ಬಿಡುಗಡೆಗೊಳಿಸಲಾಯಿತು.

ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಎ ಸುಬ್ಬಣ್ಣ ರೈ ಮಾತನಾಡಿ ರಾಜ್ಯದಲ್ಲಿ ಕನ್ನಡ ಬಳಕೆಯ ಮಧ್ಯೆ ತುಳುವನ್ನು ಸುಭದ್ರವಾಗಿಸುವುದು. ಸವಾಲಿನ ಕಾರ್ಯ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಡಾ. ಪಿ.ಎಸ್ ಎಡಪಡಿತ್ತಾಯ ಮಾತನಾಡಿ ತುಳು ತೇರು ಎಳೆಯಲು ನಾವೆಲ್ಲರೂ ಕೈಜೋಡಿಸಬೇಕು ಎಂದರು

ಮಲಾರ್ ಜಯರಾಮ ರೈ ಅವರ ಸಂಪಾದಕತ್ವದಲ್ಲಿ ರಚಿಸಲಾದ ಅವಧೂತ ಪಜ್ಜೆಲು ಪುಸ್ತಕ ಬಿಡುಗಡೆಗೊಳಿಸಲಾಯಿತು. ಸಾಧ್ವೀ ಮಾತಾನಂದಮಯೀ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಸಾಲ್ಯಾನ್, ಮಲಾರ್ ಜಯರಾಮ ರೈ ಉಪಸ್ಥಿತರಿದ್ದರು. ಒಡಿಯೂರು ಗ್ರಾಮ ವಿಕಾಸ ಯೋಜನೆಯ ವಿಸ್ತರಣಾಧಿಕಾರಿ ಸದಾಶಿವ ಅಳಿಕೆ ನಿರೂಪಿಸಿದರು. ರೇಣುಕಾ ಎಸ್ ರೈ ಪ್ರಾರ್ಥಿಸಿದರು. ತುಳು ಸಾಹಿತ್ಯ ಸಮ್ಮೇಳನ ಸಮಿತಿ ಸಂಚಾಲಕ ಡಾ. ವಸಂತಕುಮಾರ್ ಪೆರ್ಲ ಸ್ವಾಗತಿಸಿದರು. ಜಯಪ್ರಕಾಶ್ ವಂದಿಸಿದರು. ಯಶವಂತ ವಿಟ್ಲ ಪರಿಚಯಿಸಿದರು.

ಸಮಾರೋಪ ಸಮಾರಂಭ:

ಕೃಷಿ ಋಷಿ ಸಂಸ್ಕೃತಿ ಬದುಕಿನ ಎರಡು ಕಣ್ಣುಗಳಾಗಿದೆ. ಒಟ್ಟು ಸಮಾಜಕ್ಕೆ ತುಳು ಸಾಹಿತ್ಯ ಸಮ್ಮೇಳನ ಸಂದೇಶ ನೀಡಿದೆ ಸಮಾರೋಪದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಈ ಸಂದರ್ಭ ಹೇಳಿದರು. ಸಾದ್ವಿ ಮಾತಾನಂದಮಯೀ ಆಶೀರ್ವಚನ ನೀಡಿ ಯುವ ಪೀಳಿಗೆಗೆ ತುಳುವಿನ ವಿಚಾರವನ್ನು ನೀಡುವ ಕಾರ್ಯವಾಗಬೇಕು ಎಂದರು. ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಎ ಸುಬ್ಬಣ್ಣ ರೈ ಮಾತನಾಡಿ ಪ್ರಾದೇಶಿಕ ಭಾಷೆಗಳ ಅಧ್ಯಯನ ನಡೆಯಬೇಕೆಂದರು.

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ. ಎಲ್. ಸಾಮಗ ಮಾತನಾಡಿ ಭಾಷೆ ಹಾಗೂ ಸಂಸ್ಕೃತಿಯನ್ನು ಕಲಿಸುವ ಕಾರ್ಯವಾಗಬೇಕು. ಕಾರ್ಯವನ್ನು ಆಚರಣೆಗೆ ತರುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕೆಂದರು.

ಯೋಗ ಜಗದೀಶ ಶೆಟ್ಟಿ ಬಿಜೈ, ಮಾಜಿ ಸೈನಿಕ-ಮುಳುಗುತಜ್ಞ ಕಮಲಾಕ್ಷ ಬಂಗೇರ ಹರಿವೇಕಳ, ನಾಟಿವೈದ್ಯೆ ಲಕ್ಷ್ಮೀ ಬೇಡಗುಡ್ಡೆ, ಬೆನ್ನಿ ಬಾಲಕೃಷ್ಣ ಶೆಟ್ಟಿ ಪಾವೂರು, ದೈವಾರಾಧನೆ ಕುಟ್ಟಿ ನಲಿಕೆ ಅವರಿಗೆ ’ತುಳುಸಿರಿ’ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ನಿಟ್ಟೆ ಶಶಿಧರ ಶೆಟ್ಟಿ, ತುಳು ಸಾಹಿತ್ಯ ಸಮ್ಮೇಳನ ಸಮಿತಿ ಸಂಚಾಲಕ ಡಾ. ವಸಂತಕುಮಾರ್ ಪೆರ್ಲ, ಒಡಿಯೂರು ತುಳು ಕೂಟದ ಅಧ್ಯಕ್ಷ ಮಲಾರು ಜಯರಾಮ ರೈ ಉಪಸ್ಥಿತರಿದ್ದರು. ಒಡಿಯೂರು ಜೈ ಗುರುದೇವ ಕಲಾಕೇಂದ್ರದ ಅಧ್ಯಕ್ಷ ಸುಬ್ರಹ್ಮಣ್ಯ ಒಡಿಯೂರು ಸ್ವಾಗತಿಸಿದರು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಗ್ರಾಮ ಸಂಯೋಜಕಿ ಲೀಲಾ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕಿ ಜ್ಯೋತಿ, ವಿದ್ಯಾರ್ಥಿ ಸನ್ನಿಧಿ, ಶಿಕ್ಷಕಿ ಸವಿತಾ, ಐಟಿಐ ಉಪನ್ಯಾಸಕ ವಿನೋದ ಸನ್ಮಾನ ಪತ್ರ ಓದಿದರು. ಮಾತೇಷ್ ಭಂಡಾರಿ ವಂದಿಸಿದರು. ದೇವಿಪ್ರಸಾದ್ ಶೆಟ್ಟಿ ಬೆಜ್ಜ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ ಕಾರ್ಯಕ್ರಮ

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts