gopal poojari alettur
gopal poojari alettur
ಬಂಟ್ವಾಳ: ಬಿ.ಸಿ.ರೋಡಿನ ಅಲೆತ್ತೂರು ನಿವಾಸಿ ಗೋಪಾಲ ಪೂಜಾರಿ ಅಲೆತ್ತೂರು (76) ಸೋಮವಾರ ಬೆಳಗ್ಗೆ ನಿಧನ ಹೊಂದಿದರು. ಕೃಷಿಕರು, ಗುತ್ತಿಗೆದಾರರಾಗಿದ್ದ ಅವರು, ಬಿಲ್ಲವ ಸಮಾಜದ 1ನೇ ಗುರಿಕ್ಕಾರರಾಗಿದ್ದು, ಅಡೆಪಿಲ ಭಂಡಾರಮನೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪತ್ನಿ, ಪುತ್ರ ಸಾಮಾಜಿಕ ಕಾರ್ಯಕರ್ತ, ಯುವವಾಹಿನಿ ಮಾಜಿ ಅಧ್ಯಕ್ಷ ಲೋಕೇಶ್ ಸುವರ್ಣ, ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ.