ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317ಡಿ ಆಶ್ರಯದಲ್ಲಿ ಯುವವಾಹಿನಿ ಬಂಟ್ವಾಳ ಮತ್ತು ಲಯನ್ಸ್ ಕ್ಲಬ್ ಬಂಟ್ವಾಳ ಆತಿಥ್ಯದಲ್ಲಿ ಫೆ.6ರ ಗುರುವಾರ ಬೆಳಗ್ಗೆ 9.30ರಿಂದ ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ತ್ರಿನೇತ್ರ ನಾಳೆಗಳ ಭರವಸೆ ಕಣ್ಣುಗಳು ಎಂಬ ಪರಿಕಲ್ಪನೆಯಡಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.
ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಬಂಟ್ವಾಳ ಅಧ್ಯಕ್ಷ ಶ್ರೀನಿವಾಸ ಮೇಲ್ಕಾರ್ ಮಾಹಿತಿ ನೀಡಿದರು.
ಮಾನಸಿಕ ತುಮುಲಗಳಿಗೆ ಉತ್ತರ ಕಂಡುಕೊಳ್ಳಲಾಗದೆ ನಲುಗುತ್ತಿರುವ ಯುವ ಸಮುದಾಯಕ್ಕೆ, ಬುದ್ದಿಗೆ ಕೆಲಸ ಕೊಡದೆ ಆತುರದ ನಿರ್ಧಾರದಿಂದ ಸಮಸ್ಯೆಯ ಸುಳಿಯೊಳಗೆ ಸಿಲುಕುತ್ತಿರುವ ಯುವ ಸಮುದಾಯದ ಜೊತೆಗೆ ನೇರಾ ನೇರಾ ಮಾತುಕತೆಗೆ ವೇದಿಕೆಯನ್ನು ಸಿದ್ಧಗೊಳಿಸಲಾಗಿದೆ ಎಂದರು.
ಕಾನೂನು, ರಾಜಕೀಯ ಹಾಗೂ ಮನಃಶಾಸ್ತ್ರ ಎಂಬ ಮೂರು ವಿಚಾರಗಳಲ್ಲಿ ಪರಿಣತ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಕಾನೂನು ಸಂವಾದದಲ್ಲಿ ನಿವೃತ್ತ ಲೋಕಾಯುಕ್ತರಾದ ಜಸ್ಟೀಸ್ ಎನ್. ಸಂತೋಷ್ ಹೆಗ್ಡೆ ಹಾಗೂ ದ.ಕ ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀ ಪ್ರಸಾದ್, ರಾಜಕೀಯ ಸಂವಾದದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮಾಜಿ ಶಾಸಕರಾದ ವೈ.ಎಸ್.ವಿ.ದತ್ತಾ, ಮನಃಶಾಸ್ತ್ರ ಸಂವಾದದಲ್ಲಿ ಖ್ಯಾತ ಮನೋರೋಗ ತಜ್ಞರಾದ ಡಾ. ರವೀಶ ತುಂಗಾ ಹಾಗೂ ಡಾ. ರಮೀಳಾ ಶೇಖರ್ ಭಾಗವಹಿಸುತ್ತಿದ್ದಾರೆ. ಬೆಳಗ್ಗೆ 9.30ಕ್ಕೆ.ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್ ಸಂವಾದ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ. ಬಂಟ್ವಾಳ ತಾಲೂಕು ತಹಸೀಲ್ದಾರ್ ರಶ್ಮಿ ಎಸ್.ಆರ್., ಲಯನ್ಸ್‌ಜಿಲ್ಲಾ ಗವರ್ನರ್ ರೊನಾಲ್ಡ್ ಗೋಮ್ಸ್, ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು, ಲಯನ್ಸ್‌ಜಿಲ್ಲಾ ಪ್ರಥಮ ಉಪರಾಜ್ಯಪಾಲ ಡಾ.ಗೀತ್ ಪ್ರಕಾಶ್, ಲಯನ್ಸ್‌ಜಿಲ್ಲಾ ದ್ವಿತೀಯ ಉಪರಾಜ್ಯಪಾಲ ವಸಂತ್‌ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಲಯನ್ಸ್ ಜಿಲ್ಲಾ ಕೋಶಾಧಿಕಾರಿ ಹರೀಶ್ ಶೆಟ್ಟಿ, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ಇಂದಿರೇಶ್ ಬಿ., ಲಯನ್ಸ್ ಉಪಾಧ್ಯಕ್ಷ ಕೃಷ್ಣಶ್ಯಾಮ್, ಸದಸ್ಯ ರಾಘವೇಂದ್ರ ಕಾರಂತ, ಯುವವಾಹಿನಿ ಉಪಾಧ್ಯಕ್ಷ ಸುಂದರ ಪೂಜಾರಿ, ಕಾರ್ಯದರ್ಶಿ ಪುರುಷೋತ್ತಮ ಕಾಯರ್ ಪಲ್ಕೆ, ಕಾರ್ಯಾಗಾರ ಸಂಚಾಲಕ ಶಿವಪ್ರಸಾದ್, ಚೇತನ್ ಮುಂಡಾಜೆ, ಪ್ರಮುಖರಾದ ದಿನೇಶ್ ಸುವರ್ಣ ರಾಯಿ, ರಾಜೇಶ್ ಸುವರ್ಣ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…