ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಸರಕಾರ ಬಹಳಷ್ಟು ವೆಚ್ಚಗಳನ್ನು ಮಾಡುತ್ತಿದ್ದು, ಪೋಷಕರು ಪ್ರತಿಷ್ಠೆ ಬಿಟ್ಟು ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವಂತಾಗಲಿ ಎಂದು ಮಂಗಳೂರು ಶಾಸಕ ಯು.ಟಿ.ಖಾದರ್ ಹೇಳಿದರು.
ಬಂಟ್ವಾಳ ತಾಲೂಕಿನ ಇರಾ ಗ್ರಾಮದ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಇರಾ ಬಾಳೆಪುಣಿಯಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಎಂ.ಆರ್.ಪಿ.ಎಲ್ ಸಹಕಾರದಿಂದ ನೂತನವಾಗಿ ನಿರ್ಮಿಸಲಾದ ಮೂರು ತರಗತಿ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷ ತೆಯನ್ನು ಇರಾ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಜಿಪಂ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಬಿಇಒ ಜ್ಞಾನೇಶ್, ಇಸಿಒ ಸುಶೀಲಾ, ಬಾಳೆಪುಣಿ ಮುದರ್ರಿಸ್ ಆಲ್ ಹಾಜಿ ಮಹಮ್ಮದಲಿ ಫೈಝಿ, ನ್ಯಾಯವಾದಿ ಯಶವಂತ ಮರೋಳಿ, ಗ್ರಾಪಂ ಸದಸ್ಯರಾದ ಎಂ.ಬಿ.ಉಮ್ಮರ್, ಮೊಯ್ದೀನ್ ಮೂಲೆ, ತಿಬಿಯಾನ್ ಸ್ಕೂಲ್ ಅಧ್ಯಕ್ಷ ಮೊಯ್ದೀನ್ ಹಾಜಿ ಬದಿಮಾಲೆ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಅಝೀಝ್ ಬಡದಲ, ಎಸ್.ಡಿ.ಎಂ.ಸಿ. ಅಧ್ಯಕ್ಷ ಹಸೈನಾರ್ ಭಾಗವಹಿಸಿದ್ದರು. ಶಾಲಾ ಪೋಷಕ ಕುಂಞಹಾಜಿ ಬಾಳೆಪುಣಿ ಅವರನ್ನು ಸನ್ಮಾನಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಸವಿತಾ ಸ್ವಾಗತಿಸಿದರು. ಸಹಶಿಕ್ಷಕಿ ಅನುಸೂಯ ವಂದಿಸಿದರು. ಶೋಭಿತಾ ಹಾಗೂ ವಿಜಯಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.