ಕಡೇಶಿವಾಲಯದ ಪ್ರತಾಪನಗರ ಶ್ರೀರಾಮ ಭಜನಾ ಮಂದಿರದ ಆಶ್ರಯದಲ್ಲಿ ರಾಮೋತ್ಸವ ನಡೆಯಿತು. ನಾಲ್ಕು ದಿನಗಳ ಕಾಲ ಗ್ರಾಮ ಸಂಕೀರ್ತನೆ ಈ ಸಂದರ್ಭ ಗಮನ ಸೆಳೆಯಿತು. ಸೂರ್ಯೋದಯ ಸಮಯ ಗಣಹೋಮ ನಡೆದು ನಂತರ ದೀಪೋಜ್ವಲನೆಯ ಮೂಲಕ ಭಜನೆ ಆರಂಭವಾಯಿತು. 14 ಭಜನಾ ಮಂಡಳಿಗಳ ಸಹಕಾರದೊಂದಿಗೆ ಅರ್ಧ ಏಕಾಹ ಭಜನೆ ಸೂರ್ಯಸ್ತ ಸಮಯದಲ್ಲಿ ಶ್ರೀ ರಾಮಚಂದ್ರನಿಗೆ ಮಹಾ ಮಂಗಳಾರತಿಯ ಮೂಲಕ ಸಮಾಪ್ತಿಗೊಂಡಿತು.
ನಂತರ ಉಯ್ಯಾಲೆಯಲ್ಲಿ ವಿರಾಜಮಾನಳಾಗಿದ್ದ ತಾಯಿ ಭಾರತಿಗೆ ದೀಪ ಬೆಳಗಿ ಪುಷ್ಪಾರ್ಚನೆಯ ಮಾಡುವುದರ ಮೂಲಕ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ವಹಿಸಿದ್ದರು. ಕಹಳೆ ನ್ಯೂಸ್ ಸಂಪಾದಕ ಶ್ಯಾಮ ಸುದರ್ಶನ್ ಹೊಸಮೂಲೆ ದಿಕ್ಸೂಚಿ ಭಾಷಣಗೈದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು, ಪ್ರಮುಖರಾದ ತಿರುಮಲೇಶ್ವರ ಭಟ್ ಕೈಂತಜೆ ಭಜನಾ ಮಂದಿರದ ಪದಾಧಿಕಾರಿಗಳಾದ ಭಾಸ್ಕರ ಮುಂಡಾಲ ಹಾಗೂ ಗಿರೀಶ್ ಕೊರತಿಗುರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಊರಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.ಹಿಂದೂ ಜಾಗರಣ ವೇದಿಕೆ ಕಡೇಶಿವಾಲಯ ದೀಪಾವಳಿ ಕ್ರೀಡೋತ್ಸವ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಸೆಲ್ಫೀ ವಿಥ್ ಗುರುಸ್ವರೂಪಿ ಸ್ಪರ್ಧೆಯ ವಿಜೇತರಿಗೆ ಅಭಿನಂದನೆ ಹಾಗೂ ಬಹುಮಾನ ವಿತರಣೆ ನಡೆಯಿತು. ಗಿರೀಶ್ ಸ್ವಾಗತಿಸಿದರು ದುರ್ಗಾಪ್ರಸಾದ್ ಧನ್ಯವಾದ ಸಮರ್ಪಿಸಿದರು. ಶೃತಿನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.. ಅನ್ನ ಸಂತರ್ಪಣೆಯ ಬಳಿಕ ದೇಂತಡ್ಕ ಮೇಳದವರಿಂದ ಮೈಮೆದ ಮಹಮ್ಮಾಯಿ ತುಳು ಯಕ್ಷಗಾನ ನಡೆಯಿತು.
ಬಂಟ್ವಾಳನ್ಯೂಸ್ ಸಂಪಾದಕ: ಹರೀಶ ಮಾಂಬಾಡಿ