ವಸತಿ ಸಂಕೀರ್ಣವೊಂದರ ಪೈಂಟಿಂಗ್ ಮಾಡುವ ವೇಳೆ ನಡೆದ ಅವಘಡದಲ್ಲಿ ಪೈಂಟರ್ ಓರ್ವ ಮೃತಪಟ್ಟಿದ್ದು, ಮತ್ತೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಂಟ್ವಾಳದ ಭಂಡಾರಿಬೆಟ್ಟು ಎಂಬಲ್ಲಿ ಬುಧವಾರ ಘಟನೆ ನಡೆದಿದೆ, ಪೈಂಟಿಗ್ ಪ್ರಕ್ರಿಯೆ ವೇಳೆ ಬಂಟ್ವಾಳ ನಿವಾಸಿ ಕೇಶವ ಮತ್ತು ಬಂಟ್ವಾಳದ ಕಾಮಾಜೆ ನಿವಾಸಿ ಸುರೇಶ್ (32) ಬಿದ್ದಿದ್ದಾರೆ. ಈ ಸಂದರ್ಭ ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ಕೊಂಡೊಯ್ದರೂ ಸುರೇಶ್ ಮೃತಪಟ್ಟಿರುವುದಾಗಿ ಘೋಷಿಸಲಾಗಿದ್ದು, ಮತ್ತೋರ್ವ ಕೇಶವ ತಲೆಗೆ ತೀವ್ರ ಗಾಯಗಳೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.