ರಾಜ್ಯ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ತುಂಬೆ ವೆಂಟೆಡ್ ಡ್ಯಾಂಗೆ ಬುಧವಾರ ಭೇಟಿ ನೀಡಿ ಪ್ರಸಕ್ತ ನೀರಿನ ಸ್ಥಿತಿಗತಿಯ ಪರಿಶೀಲನೆ ನಡೆಸಿದ್ದಾರೆ.
ತುಂಬೆ ವೆಂಟೆಡ್ ಡ್ಯಾಂಗೆ ಭೇಟಿ ನಂತರ ಮುಖ್ಯ ಕಾರ್ಯದರ್ಶಿ ಮಂಗಳೂರು ನಗರಕ್ಕೆ ನೀರು ಸರಬರಾಜಾಗುವ ತುಂಬೆ ವೆಂಟೆಡ್ ಡ್ಯಾಂಗೆ ಭೇಟಿ ನೀಡಿದರು. ಅಣೆಕಟ್ಟಿನಲ್ಲಿ ನೀರು ಸಂಗ್ರಹ ಮಟ್ಟವನ್ನು ವೀಕ್ಷಿಸಿದ ಅವರು, ಮುಂದಿನ ಬೇಸಿಗೆಯಲ್ಲಿ ನಗರದಲ್ಲಿ ಯಾವುದೇ ರೀತಿ ನೀರಿನ ಕೊರತೆಯಾಗದಂತೆ ನೀರು ಸರಬರಾಜು ಮಾಡಲು ಸೂಚಿಸಿದರು. ಈಗಿನ ವ್ಯವಸ್ಥೆಯಲ್ಲಿ ಅಣೆಕಟ್ಟಿನಲ್ಲಿ 6 ಮೀಟರ್ ಎತ್ತರಕ್ಕೆ ನೀರು ನಿಲ್ಲಿಸುವುದು ಸೂಕ್ತವಾಗಿದೆ. ಇದೇ ಮಟ್ಟದಲ್ಲಿ ನೀರು ನಿಲ್ಲಿಸಿ, ಅಗತ್ಯ ಬಿದ್ದರೆ ರೇಶನಿಂಗ್ ವ್ಯವಸ್ಥೆ ಮೂಲಕ ನೀರು ಸರಬರಾಜು ಮಾಡಲು ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಮಂಗಳೂರು ಕಮೀಷನರ್ ಶಾನಾಡಿ ಅಜಿತ್ ಹೆಗ್ಡೆ ಮತ್ತಿತರರು ಇದ್ದರು.