ಬಂಟ್ವಾಳ ವಲಯದ ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಮತ್ತು ಸಾರ್ವಜನಿಕರ ವತಿಯಿಂದ ಹಿರಿಯ ಛಾಯಾಗ್ರಾಹಕ ಪದ್ಮನಾಭ ರಾವ್ ಅವರಿಗೆ ನುಡಿನಮನವನ್ನು ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ನಲ್ಲಿ ಮಂಗಳವಾರ ಸಂಜೆ ಸಲ್ಲಿಸಲಾಯಿತು.
ಮಿತಭಾಷಿಯಾಗಿ, ಸ್ನೇಹಜೀವಿಯಾಗಿದ್ದ ಪದ್ಮನಾಭ ರಾವ್ ಅವರ ಗುಣಸ್ವಭಾವ ಅನುಕರಣೀಯ, ಮಾತು, ನಡವಳಿಕೆ, ಸಂಸ್ಕಾರದ ಮೂಲಕ ಮಾದರಿಯಾಗಿದ್ದವರು ಪದ್ದಣ್ಣ ಎಂದೇ ಕರೆಯಲ್ಪಡುವ ಪದ್ಮನಾಭ ರಾವ್ ಎಂದು ಸಂತಾಪ ಸೂಚಕ ಮಾತುಗಳನ್ನಾಡಿದವರು ತಿಳಿಸಿದರು. ಇದೇ ವೇಳೆ ಪದ್ಮಾ ಕಾಂಪ್ಲೆಕ್ಸ್ ಮಾಲೀಕ ಹಾಗೂ ಕಲಾಪೋಷಕ ಬಿ.ಸತೀಶ್ ರಾವ್ ಅವರಿಗೂ ನುಡಿನಮನ ಸಲ್ಲಿಸಲಾಯಿತು.
ನಿವೃತ್ತ ಮುಖ್ಯೋಪಾಧ್ಯಾಯ, ರಂಗಕರ್ಮಿ ಮಹಾಬಲೇಶ್ವರ ಹೆಬ್ಬಾರ, ಹಿರಿಯ ಕಲಾವಿದ ಮಂಜು ವಿಟ್ಲ, ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ, ರಾವ್ ಅವರ ಸಹೋದರ ಬಿ.ರಾಮಚಂದ್ರ ರಾವ್, ಫೊಟೋಗ್ರಾಫರ್ಸ್ ಸಂಘದ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ, ಹಿರಿಯ ಕಲಾವಿದ ಸರಪಾಡಿ ಅಶೋಕ ಶೆಟ್ಟಿ, ನಿವೃತ್ತ ಪ್ರೊಫೆಸರ್ ಅನಂತ ಪದ್ಮನಾಭ ರಾವ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಹರೀಶ ಮಾಂಬಾಡಿ, ಛಾಯಾಗ್ರಾಹಕರ ಸಂಘದ ಪ್ರಮುಖರಾದ ದಯಾನಂದ್, ಪತ್ರಕರ್ತರಾದ ರಾಜಾ ಬಂಟ್ವಾಳ, ರತ್ನದೇವ ಪುಂಜಾಲಕಟ್ಟೆ, ಪದ್ಮನಾಭ ರಾವ್ ಅವರ ಪುತ್ರಿ ಪಲ್ಲವಿ ರಾವ್ ನುಡಿನಮನ ಸಲ್ಲಿಸಿದರು. ಕಲಾವಿದ, ರಂಗಕರ್ಮಿ ಎಚ್. ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು. ಪ್ರಮುಖರಾದ ವಿಶ್ವನಾಥ ಬಂಟ್ವಾಳ್, ಸುಂದರ ರಾವ್, ಫೊಟೋಗ್ರಾಫರ್ಸ್ ಸಂಘದ ಸದಸ್ಯರು, ನಾನಾ ಸಂಘಟನೆಗಳ ಪ್ರಮುಖರು ಈ ಸಂದರ್ಭ ಹಾಜರಿದ್ದರು.