ಬಂಟ್ವಾಳ ತಾಲೂಕಿನ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠ ಮತ್ತು ಮಂಗಳೂರು ಹೋಬಳಿ ಮತ್ತು ಶ್ರೀರಾಮ ಸಂಸ್ಕೃತ ವೇದಪಾಠಶಾಲೆ ವಾರ್ಷಿಕೋತ್ಸವ, ಸೂತ್ರಸಂಗಮ ಕಾರ್ಯಕ್ರಮ ಭಾನುವಾರ ಪೆರಾಜೆ ಮಠದಲ್ಲಿ ನಡೆಯಿತು.
ಈ ಸಂದರ್ಭ ಆಶೀರ್ವಚನ ನೀಡಿದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ, ಭಾರತೀಯ ಸಂಸ್ಕೃತಿಯಲ್ಲಿ ಪೂರ್ಣ ಮಂಡಲಕ್ಕೆ ವಿಶೇಷ ಸ್ಥಾನವಿದ್ದು, ಮಾಣಿ ಮಠ ಆ ಸಂಭ್ರಮದಲ್ಲಿದೆ. ಪೂರ್ಣ ಮಂಡಲದ ವರ್ಷ ನಿರಂತರ ಕಾರ್ಯಕ್ರಮಗಳು, ಉತ್ಸವಗಳು ನಡೆಯಬೇಕು ಎಂದು ಹಾರೈಸಿದರು.
ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಸೇವಾ ಸಮಿತಿ ವತಿಯಿಂದ ಶ್ರೀಗಳವರ ಮುಂದಿನ ಚಾತುರ್ಮಾಸ್ಯವನ್ನು ಮಾಣಿಯಲ್ಲಿ ನಡೆಸುವಂತೆ ಬೇಡಿಕೆ ಸಲ್ಲಿಸಲಾಯಿತು. ವೇದಪಾಠ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಹಾರಕರೆ ನಾರಾಯಣ ಭಟ್ ಪ್ರಾಸ್ತಾವನೆಗೈದರು. ಬಂಗಾರಡ್ಕ ಜನಾರ್ಧನ ಭಟ್ ಲೆಕ್ಕಪತ್ರ ಮಂಡಿಸಿದರು. ಸಿಗಂದೂರು ಸತ್ಯ ಪ್ರತಿಭಾಪುರಸ್ಕಾರ ನಿರ್ವಹಣೆ ಮಾಡಿದರು. ಸೇರಾಜೆ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿದರು. ಪ್ರಮುಖರಾದ ಶೈಲಜಾ ಕೆ.ಟಿ.ಭಟ್, ಹರಿಪ್ರಸಾದ ಪೆರಿಯಪ್ಪು ಮತ್ತಿತರರು ಉಪಸ್ಥಿತರಿದ್ದರು.