ಯುವ ನ್ಯಾಯವಾದಿಗಳು ವೃತ್ತಿಸಂಬಂಧಿ ವಿಚಾರಗಳನ್ನು ಅಪ್ ಡೇಟ್ ಮಾಡಿಕೊಳ್ಳುವ ಮೂಲಕ ಸದಾ ಅಧ್ಯಯನಶೀಲರಾಗಿರುವುದು ಅಗತ್ಯವಾಗಿದೆ ಎಂದು ದ.ಕ. ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ ಹೇಳಿದರು.
www.bantwalnews.com Editor: Harish Mambady
ನ್ಯಾಯವಾದಿಗಳ ಅರಿವು ವಿಸ್ತಾರಗೊಳ್ಳಲು ಇರುವ ಕಾರ್ಯಾಗಾರಕ್ಕೆ ಯುವ ನ್ಯಾಯವಾದಿಗಳು ಸಕ್ರಿಯವಾಗಿ ಆಸಕ್ತಿಯಿಂದ ಪಾಲ್ಗೊಳ್ಳುವುದು ಅಗತ್ಯ. ಸಾಮಾಜಿಕ ಬದಲಾವಣೆ, ಉನ್ನತಿಗೆ ವಕೀಲರು ಕೆಲಸ ಮಾಡುವ ಅಗತ್ಯವಿದ್ದು, ವಕೀಲವೃತ್ತಿಯ ಮೂಲಪಾಠಗಳನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷ, ಹೈಕೋರ್ಟ್ ಹಿರಿಯ ನ್ಯಾಯವಾದಿ ಪದ್ಮಪ್ರಸಾದ್ ಹೆಗ್ಡೆ ಮಾತನಾಡಿ, ವಕೀಲರ ವೃತ್ತಿಕೌಶಲಗಳನ್ನು ವೃದ್ಧಿಸಿಕೊಳ್ಳಲು ಕಾರ್ಯಾಗಾರಗಳು ಅಗತ್ಯ ಎಂದರು.
ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಲಯ ಜೆಎಂಎಫಸಿ ನ್ಯಾಯಾಧೀಶ ಮಹಮ್ಮದ್ ಇಮ್ತಿಯಾಜ್ ಅಹಮದ್, ಬಂಟ್ವಾಳ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶಿಲ್ಪಾ ಜಿ. ತಿಮ್ಮಾಪುರ, ಹಿರಿಯ ವಕೀಲ ಕೆ.ವಿ.ವಾಸುದೇವ ರಾವ್, ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ಹಿರಿಯ ನ್ಯಾಯವಾದಿಗಳಾದ ಅಶ್ವನಿ ಕುಮಾರ್ ರೈ, ಗಣೇಶಾನಂದ ಸೋಮಯಾಜಿ, ಚಂದ್ರಶೇಖರ ಪೂಜಾರಿ, ರಮಾನಂದ ಕಾರಂದೂರು ಉಪಸ್ಥಿತರಿದ್ದರು. ಬಳಿಕ ನಡೆದ ಕಾರ್ಯಾಗಾರದಲ್ಲಿ ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ಇಮ್ತಿಯಾಜ್ ಅಹಮದ್, ಹಿರಿಯ ನ್ಯಾಯವಾದಿಗಳಾದ ಕೆ.ವಿ.ವಾಸುದೇವ ರಾವ್, ಎಂ.ವಿ.ಶಂಕರ ಭಟ್, ಎಸ್.ಪಿ.ಚಂಗಪ್ಪ ನಾನಾ ವಿಷಯಗಳ ಕುರಿತು ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಸ್ವಾಗತಿಸಿದರು. ಹಿರಿಯ ನ್ಯಾಯವಾದಿ ನರೇಂದ್ರನಾಥ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.