ಬಂಟ್ವಾಳ

ವಾಹನ ರಸ್ತೆಗಿಳಿಸಿದ ಬಳಿಕ ಸುರಕ್ಷತೆ ಕಡೆಗಿರಲಿ ಗಮನ

  • ಮೇಲ್ಕಾರಿನಲ್ಲಿ ನಡೆದ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಗಣ್ಯರ ಕಿವಿಮಾತು

www.bantwalnews.com Editor: Harish Mambady

ಸಾರಿಗೆ ಇಲಾಖೆಯ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಆಶ್ರಯದಲ್ಲಿ ಮೇಲ್ಕಾರ್ ನ ಬಿರ್ವ ಸೆಂಟರ್ ನಲ್ಲಿ ಶುಕ್ರವಾರ ಆರಂಭಗೊಂಡ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ.ಚಿನ್ನಪ್ಪ ಗೌಡ ಉದ್ಘಾಟಿಸಿದರು. ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಟಿ.ಡಿ. ನಾಗರಾಜ್ ಉಪಸ್ಥಿತರಿದ್ದರು. ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಪ್ರಭಾರ) ಚರಣ್ ಕೆ. ಅಧ್ಯಕ್ಷತೆ ವಹಿಸಿದ್ದರು. ಕಚೇರಿ ಅಧೀಕ್ಷಕ ಬಿ.ಕೆ.ಸತೀಶ್ ಸ್ವಾಗತಿಸಿದರು. ಸಿಬ್ಬಂದಿ ನೀಲಪ್ಪ ವಂದಿಸಿದರು. ಸ್ಮಿತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ಸಂಜೀವ ಪೂಜಾರಿ ಸಹಿತ ಸಾರ್ವಜನಿಕರು ಹಾಜರಿದ್ದರು. ಈ ಸಂದರ್ಭ ಮಾತನಾಡಿದ ಅತಿಥಿಗಳು ಹೇಳಿದ್ದು ಹೀಗೆ.

ಜಾಹೀರಾತು

  • ವಾಹನವನ್ನು ಸಂಪೂರ್ಣವಾಗಿ ಅರಿತ ಮೇಲಷ್ಟೇ ಅದನ್ನು ಚಲಾಯಿಸಿ, ವೇಗ, ಸಾಹಸ ಇರಲಿ. ಆದರೆ ನಿಯಂತ್ರಣ ಕಳೆದುಕೊಳ್ಳಬೇಡಿ,
  • ರಸ್ತೆ ಸುರಕ್ಷತೆ ಕೇವಲ ಇಲಾಖೆಗಳ ಜವಾಬ್ದಾರಿಯಲ್ಲ, ವಾಹನ ಚಲಾಯಿಸುವವನಿಗೂ ಎಚ್ಚರ, ಅರಿವು ಇರಬೇಕು
  • ಸಾಮಾಜಿಕ ಜಾಲತಾಣವನ್ನು ರಸ್ತೆ ಸುರಕ್ಷತೆ ವಿಚಾರದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು. ರಸ್ತೆ ನಿಗಮ, ವೈದ್ಯಕೀಯ, ಶಿಕ್ಷಣ, ಸಾರ್ವಜನಿಕರು ಒಟ್ಟು ಸೇರುವುದರ ಮೂಲಕ ರಸ್ತೆ ಸುರಕ್ಷತಾ ಕ್ರಮಗಳನ್ನು ಕಂಡುಕೊಳ್ಳಬೇಕು.
  • ಚಾಲಕ ಕಾಲಕಾಲಕ್ಕೆ ಅಪ್ ಡೇಟ್ ಆಗಬೇಕು 2018ರಲ್ಲಿ ಇಡೀ ವಿಶ್ವದಲ್ಲಿ 13 ಲಕ್ಷ ಜನರು ವಾಹನ ಅಪಘಾತಗಳಿಂದ ಮೃತಪಟ್ಟರೆ, ಸುಮಾರು 50 ಲಕ್ಷದಷ್ಟು ಮಂದಿ ಗಾಯಗೊಂಡಿರುವುದು ಗಂಭೀರ ವಿಚಾರ
  • ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸುವವರ ವಿರುದ್ಧ ಪೊಲೀಸರು ಹದ್ದಿನ ಕಣ್ಣಿಟ್ಟಿರುತ್ತಾರೆ. ಏಕೆಂದರೆ ಕಳೆದ ಅವಧಿಯಲ್ಲಿ ಹೆಲ್ಮೆಟ್ ರಹಿತ ಚಾಲನೆಯಿಂದಾಗಿಯೇ ಪ್ರಾಣಾಪಾಯಗಳು ಸಂಭವಿಸಿವೆ.
  • ಪೊಲೀಸರು ರಸ್ತೆ ಬದಿಯಲ್ಲಿ ನಿಂತಿರುವುದು ವಾಹನ ಚಾಲಕರಿಗೆ ಕಿರುಕುಳ ನೀಡಲು ಅಲ್ಲ, ನಿಮ್ಮ ಸುರಕ್ಷತೆಯ ಕುರಿತು ಕಾಳಜಿ ಇರುವ ಕಾರಣ ಹೆಲ್ಮೆಟ್ ಧರಿಸಿರುವುದರ ಕುರಿತು ಎಚ್ಚರಿಗೆ ನೀಡಿ ದಂಡ ವಿಧಿಸುತ್ತೇವೆ, ಸಾರ್ವಜನಿಕರು ಕಾನೂನು ಪಾಲನೆ ಮಾಡಿದರೆ ಯಾವ ಸಮಸ್ಯೆಗಳೂ ಇರುವುದಿಲ್ಲ
  • ಬಂಟ್ವಾಳದಲ್ಲಿ ಕಳೆದೊಂದು ವರ್ಷದಲ್ಲಿ 28 ಮಂದಿ ಅಪಘಾತದಲ್ಲಿ ಸಾವನ್ನಪ್ಪಿದ್ದು, 140 ಅಪಘಾತಗಳು ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಸಂಭವಿಸಿವೆ.
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.