ಯುವಜನರು ತಮ್ಮ ಭವಿಷ್ಯದ ಬಗ್ಗೆ ಅಲೋಚನೆ ಮಾಡಬೇಕು ,ಪ್ರತಿಯೊಬ್ಬರಲ್ಲಿಯೂ ಸಾಧಿಸುವ ಗುರಿ ಇರಬೇಕು ಇದಕ್ಕೆ ಸಹಕಾರಿ ತಮ್ಮ ಜೀವನದಲ್ಲಿ ಜೀವನ ಕೌಶಲವನ್ನು ಆಳಡಿಸಿಕೊಂಡರೆ ಯಾವುದೇ ರೀತಿಯ ತೋಂದರೆಯಾಗಲಿ ಸಾಧ್ಯವಿಲ್ಲ,ಯುವಜನರಿಗೆ ಏನೇ ಸಮಸ್ಯೆ ,ತೊಂದರೆ ಇದ್ದಲ್ಲಿ ಯುವಸ್ಪಂದನ ಅದಕ್ಕೆ ಸಿದ್ದ ಮತ್ತು ಯುವಜನರಿಗೆ ಯುವಸ್ಪಂದನ ದಾರಿದೀಪವಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಯುವ ಸಮಾಲೋಚಕರಾದ ಶ್ರೀಕಾಂತ್ ಪೂಜಾರಿ ಬಿರಾವು ಹೇಳಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ದಕಟ್ಟೆಯ ಅಂತರಿಕ ಗುಣಮಟ್ಟ ಭರವಸೆ ಕೋಶ,ಲರ್ನರ್ಸ್ ಪೋರಂ,ಯುವಸ್ಪಂದನ ವಿಭಾಗ ಹಾಗೂ ನಿಮ್ಹಾನ್ಸ್ ಬೆಂಗಳೂರು ಇದರ ಜೀವನ ಕೌಶಲ ತರಬೇತಿಯನ್ನು ಕುರಿತು ಮಾತನಾಡಿದರು.ಯುವಜೀವನ ಅತೀ ಸುಂದರವಾದ ಜೀವನ ಈ ಹಂತದಲ್ಲಿ ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗದೆ ಸಮಾಜದಲ್ಲಿ ಉತ್ತಮ ಪ್ರಜೇಯಾಗಿ ಮಾದರಿ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕು,ಭಾವನೆಗಳನ್ನು ಈ ವಯಸ್ಸಿನಲ್ಲಿ ನಿಯಂತ್ರಣದಲ್ಲಿ ಇಡುವುದರಿಂದ ಅನಾಹುತಗಳಿಂದ ದೂರ ಇರಬಹುದು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ನಿಮ್ಹಾನ್ಸ್ ನ ಕ್ಷೇತ್ರ ಸಂಪರ್ಕಾಧಿಕಾರಿಯಾದ ಪ್ರೇಮಾ ಮಾತಾನಾಡಿ ಯುವಜನರು ಮಾನಸಿಕವಾಗಿ ಹೆಚ್ಚು ಒತ್ತಡಕ್ಕೆ ಸಿಲುಕುದರಿಂದ ತಮ್ಮ ಜೀವನದಲ್ಲಿ ಪರಿಪೂರ್ಣತೆಯನ್ನು ಹೊಂದಲು ಸಾಧ್ಯವಾಗುತ್ತಿಲ್ಲ ಅದ್ದರಿಂದ ಪ್ರತಿಯೊಬ್ಬರು ಜೀವನ ಕೌಶಲವನ್ನು ರೂಡಿಸಿಕೊಳ್ಳಿ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿಕೊಂಡ ಕಾಲೇಜಿನ ಪ್ರಿನ್ಸಿಪಾಲ್ ಸೌಮ್ಯ ಎಚ್. ಕೆ ಮಾತಾನಾಡಿ ಗ್ರಾಮೀಣ ಭಾಗದ ಯುವಜನರಿಗೆ ಸರಿಯಾದ ಪ್ರೋತ್ಸಾಹ ಸಿಕ್ಕಾಗ ಮಹತ್ತರ ಸಾಧಿಸುವ ಛಲ ಅವರಿಗಿದೆ ,ಯುವಜನರು ಏನೇ ಕಷ್ಟ ಆಡಚಣೆಗಳು ಬಂದರು ಜೀವನ ಕೌಶಲವನ್ನು ರೂಢಿಸಿಕೊಂಡರೆ ತಮ್ಮ ಗುರಿಯನ್ನು ತಲುಪಲು ತುಂಬಾ ಸಹಕಾರಿಯಾಗಬಹುದು ಎಂದು ಹೇಳಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜಾನಾಧಿಕಾರಿಯಾದ ದೇವಿಪ್ರಸಾದ್ ಸ್ವಾಗತಿಸಿ ,ಉಪನ್ಯಾಸಕರಾದ ಹನುಮಂತಯ್ಯ ಧನ್ಯವಾದ ಮಾಡಿದರು.ವಿಧ್ಯಾರ್ಥಿನಿ ಮೆಲ್ರಿಯಾ ಕಾರ್ಯಕ್ರಮ ನಿರೂಪಿಸಿದರು.