ಕಲ್ಲಡ್ಕದ ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ) ಆಶ್ರಯದಲ್ಲಿ. ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದೊಂದಿಗೆ ಎರಡು ದಿನಗಳ ಆಧಾರ್ ಮೇಳ ಕಲ್ಲಡ್ಕ ಪಂಚವಟಿ ವಾಣಿಜ್ಯ ಸಂಕೀರ್ಣದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಸ್ಥಳೀಯ ಹೋಟೆಲ್ ಉದ್ಯಮಿ ಎನ್. ಶಿವರಾಮ ಹೊಳ್ಳ, ಶಿವಪ್ಪ ಸಾಲಿಯಾನ್ ರಾಯಪ್ಪಕೋಡಿ, ಹಾಗೂ ಜಯಾನಂದ ಆಚಾರ್ಯ ಹನುಮಾನ್ನಗರ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾದ ಎಸ್ ಬಿ ಐನ ನಿವೃತ್ತ ಡೆಪ್ಯೂಟಿ ಮ್ಯಾನೇಜರ್ ನಾರಾಯಣ ನಾಯ್ಕ ಕೊಳಕೀರು, ಉದ್ಯಮಿಗಳಾದ ಶೈಲೇಶ್ ಶೆಟ್ಟಿ ಕೊಳಕೀರು ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಜನಸಾಮಾನ್ಯರ ಅತೀಅಗತ್ಯದ ದಾಖಲೆಯಾದ ಆಧಾರ್ ತಿದ್ದುಪಡಿ ಮತ್ತು ನೋಂದಾವಣೆಯು ಗ್ರಾಮೀಣ ಬಾಗದ ಜನರಿಗೆ ಗೊಂದಲದ ಗೂಡಾಗಿದೆ. ಈ ಕಷ್ಟವನ್ನು ಮನಗಂಡ ಪ್ರತಿಷ್ಠಾನವು ಜನಸಾಮಾನ್ಯರಿಗೆ ತಮ್ಮ ಊರಿನಲ್ಲಿಯೇ ಈ ವ್ಯವಸ್ಥೆಯನ್ನು ಒದಗಿಸಿ ಜನಮಾನಸದಲ್ಲಿ ಪ್ರೀತಿಯನ್ನು ಗಳಿಸಿದ್ದಾರೆ. ಈ ರೀತಿಯ ಜನೋಪಯೋಗಿ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಪುತ್ತೂರು ಅಂಚೆ ವಿಭಾಗದ ಹಿರಿಯ ಅಧಿಕಾರಿ ಲೋಕನಾಥ್ ಮತ್ತು ಮಾಣಿ ಅಂಚೆ ಇಲಾಖೆಯ ನೌಕರರಾದ ಬೋಜರಾಜ್ ಕುದ್ರೆಬೆಟ್ಟು ಅವರನ್ನು ಗೌರವಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷರಾದ ನರಸಿಂಹ ಮಡಿವಾಳ, ಕಾರ್ಯದರ್ಶಿಗಳಾದ ಚಿ ರಮೇಶ್ ಕಲ್ಲಡ್ಕ, ಉತ್ಸವ ಸಮಿತಿಯ ಅದ್ಯಕ್ಷರಾದ ಚಿದಾನಂದ ಆಚಾರ್ಯ ಉಪಸ್ಥಿತರಿದ್ದರು. ಪ್ರತಿಷ್ಠಾನದ ಉಪಾಧ್ಯಕ್ಷರಾದ ಯತೀನ್ ಕುಮಾರ್ ಸ್ವಾಗತಿಸಿ ಕೋಶಾದಿಕಾರಿ ವಜ್ರನಾಥ ಕಲ್ಲಡ್ಕ ವಂದಿಸಿದರು. ಗೋಪಾಲ್ ಕಲ್ಲಡ್ಕ ಕಾರ್ಯಕ್ರಮ ನಿರ್ವಹಿಸಿದರು. ಎರಡು ದಿನಗಳಲ್ಲಿ ಒಟ್ಟು 484 ಆಧಾರ್ ತಿದ್ದುಪಡಿ ಮತ್ತು ನೋಂದಾವಣೆ ನಡೆಸಿದ್ದು ಮಾಜಿ ಶಾಸಕ ಕೆ ಪದ್ಮನಾಭ ಕೊಟ್ಟಾರಿ ಮತ್ತು ತಾಪಂ ಮಾಜಿ ಉಪಾಧ್ಯಕ್ಷರಾದ ದಿನೇಶ್ ಅಮ್ಟೂರು ಬೇಟಿನೀಡಿ ಅಭಿನಂದನೆ ಸಲ್ಲಿಸಿದರು.