ಕೃಷ್ಣಮೃಗ, ಜಿಂಕೆ ಕೊಂಬುಗಳನ್ನು ಸಾಗಾಟ ಮಾಡಿ ಮಾರಲು ಯತ್ನಿಸುತ್ತಿದ್ದ ಕಂಕನಾಡಿ ಉಜ್ಜೋಡಿ ನಿವಾಸಿ ದಿಲೀಪ್ ಕುಮಾರ್ ಜಿ. (30) ಎಂಬಾತನನ್ನು ಮಂಗಳೂರು ಅರಣ್ಯ ಸಂಚಾರಿ ಪೊಲೀಸ್ ದಳ ಮತ್ತು ಬಂಟ್ವಾಳ ಅರಣ್ಯ ಇಲಾಖಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಸೋಮವಾರ ಮಧ್ಯಾಹ್ನ ಈ ಕಾರ್ಯಾಚರಣೆ ನಡೆದಿದ್ದು, ಆರೋಪಿಯಿಂದ ಕೃಷ್ಣ ಮೃಗದ ಎರಡು ಕೊಂಬುಗಳು ಹಾಗೂ ಜಿಂಕೆ ಮೃಗದ 4 ಕೊಂಬುಗಳು, ಮತ್ತು 3 ಲಕ್ಷ ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಯಿತು.
ಸಿ.ಐ.ಡಿ.ಅರಣ್ಯ ಘಟಕ ಬೆಂಗಳೂರು ಎ.ಡಿ.ಜಿ.ಪಿ ಡಾ. ರವೀಂದ್ರನಾಥನ್, ಸಿ.ಐ.ಡಿ.ಅರಣ್ಯ ಮಡಿಕೇರಿ ಘಟಕದ ಪೊಲೀಸ್ ಅಧೀಕ್ಷಕರಾದ ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಸಿ.ಐ.ಡಿ. ಅರಣ್ಯ ಸಂಚಾರದ ಪಿ.ಎಸ್.ಐ ಪುರುಷೋತ್ತಮ, ಸಿಬ್ಬಂದಿ ಗಳಾದ ಜಗನ್ನಾಥ ಶೆಟ್ಟಿ, ಉದಯ ನಾಯ್ಕ, ಮಹೇಶ್, ದೇವರಾಜ್ , ಪ್ರವೀಣ್ ಸುಂದರ್ ಶೆಟ್ಟಿ ಹಾಗೂ
ಬಂಟ್ವಾಳ ಅರಣ್ಯ ವಲಯಾಧಿಕಾರಿ ಸುರೇಶ್, ಸಿಬ್ಬಂದಿಗಳಾದ ಪ್ರೀತಂ, ವಿನಯ್, ಜಿತೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಬಂಟ್ವಾಳನ್ಯೂಸ್ ಇತರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿರಿ www.bantwalnews.com ಸಂಪಾದಕ: ಹರೀಶ ಮಾಂಬಾಡಿ