ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಸುಮವನ ಎಂಬಲ್ಲಿ ನಿವಾಸಿ ಲೇಖಕ, ಪೂಕಳ ಶಂಕರ ಭಟ್ (94) ಹೃದಯಾಘಾತದಿಂದ ಜ.13 ರಂದು ನಿಧನರಾದರು.
ಇಡ್ಕಿದು ಸೇವಾ ಸಹಕಾರಿ ಬ್ಯಾಂಕ್ ನ ಕಾರ್ಯನಿರ್ವಹಣಾಧಿಕಾರಿಯಾಗಿ, ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಳದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಇವರು ಯಕ್ಷಗಾನ ಅರ್ಥಧಾರಿಯಾಗಿದ್ದರು.
ಭಾಮಿನಿ ಷಟ್ಪದಿಯಲ್ಲಿ ಪೂಕಳ ರಾಮಾಯಣ, ಗುರುಚರಿತ್ರೆ ಮುಂತಾದ ಅನೇಕ ಕಾವ್ಯಗಳ ರಚನೆ, ಕೀರ್ತನೆ ರಚನೆ, ಯಕ್ಷಗಾನ ಪ್ರಸಂಗ ರಚನೆ, ಚುಟುಕು ಸಾಹಿತ್ಯ ಲೋಕದಲ್ಲಿ ಸೇವೆ, ಅಕಾರಾದಿ ಶಬ್ದಕೋಶಗಳು , ಪುರಾಣ ಕೋಶ ಗ್ರಂಥಗಳನ್ನೂ ಇವರು ರಚಿಸಿದ್ದರು. ಕನ್ಯಾನದ ಭಾರತ ಸೇವಾ ಆಶ್ರಮದಲ್ಲಿ ಲೆಕ್ಕ ಪರಿಶೋಧಕರಾಗಿ ಸೇವೆ ಸಲ್ಲಿಸಿದ್ದ ಇವರು ಪ್ರಗತಿ ಪರಕೃಷಿಕರಾಗಿದ್ದರು. ಕಾಸರಗೋಡು ಶ್ರೀ ಎಡನೀರು ಮಹಾ ಸಂಸ್ಥಾನ, ಹೊಸನಗರ ಮಠಗಳಿಂದ ವಿಶೇಷ ಗೌರವ, ಕೋಳ್ಯೂರು ದೇವಳದಲ್ಲಿ ಮತ್ತು ಹತ್ತು ಹಲವಾರು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿವೆ. ಪತ್ನಿ, ಸುಜೋಕು ವೈದ್ಯ ಪದ್ದತಿಯಲ್ಲಿ ಚಿಕಿತ್ಸೆ ನೀಡುವ ಪಿ. ಸುಬ್ರಹಣ್ಯ ಭಟ್ ಸೇರಿದಂತೆ 4 ಪುತ್ರರು, ಪುತ್ರಿ ಇದ್ದಾರೆ.