ಬಂಟ್ವಾಳ ಪುರಸಭೆ ವತಿಯಿಂದ ಶೇಕಡ 24.10 ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಂಟ್ವಾಳ ಪುರಸಭೆ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ರೂ 2.64 ಲಕ್ಷದ ಚೆಕ್‌ನ್ನು ಶಾಸಕ ರಾಜೇಶ್ ನಾಯ್ಕ್ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾಸಂಸ್ಥೆಯ ಪ್ರಾಂಶುಪಾಲರಿಗೆ ಹಸ್ತಾತರಿಸಿದರು. ಈ ಸಂಧರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಸಮುದಾಯ ಸಂಘಟನಾಧಿಕಾರಿ ಉಮಾವತಿ ಉಪಸ್ಥಿತರಿದ್ದರು.