ಪಡಿತರ ಚೀಟಿ ಹೊಂದಿರುವವರು ಇಕೆವೈಸಿ (ಬೆರಳಚ್ಚು)ಅನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಸಂಗ್ರಹಿಸುವ ಕಾರ್ಯ ಉಚಿತವಾಗಿ ನಡೆಯುತ್ತಿದೆ. ಇಕೆವೈಸಿಯನ್ನು ಸಂಗ್ರಹಿಸುವ ಕಾರ್ಯವನ್ನು 2020 ಮಾರ್ಚ್ 31ರವರೆಗೆ ಮುಂದುವರಿಸಲಾಗಿದೆ ಎಂದು ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಡಿತರ ಚೀಟಿಯಲ್ಲಿರುವ ಎಲ್ಲ ಸದಸ್ಯರು ಕಡ್ಡಾಯವಾಗಿ ಇಕೆವೈಸಿಯನ್ನು ತಮ್ಮ ಪಡಿತರ ಚೀಟಿಗೆ ನಿಯೋಜಿಸಿದ ನ್ಯಾಯಬೆಲೆ ಅಂಗಡಿಯಲ್ಲಿ ನೀಡಬೇಕಾಗಿದೆ. ಒಂದೇಸಲ ಕುಟುಂಬದ ಎಲ್ಲ ಸದಸ್ಯರು ನ್ಯಾಯಬೆಲೆ ಅಂಗಡಿಗೆ ಹೋಗಿ ಇಕೆವೈಸಿ ನೀಡಬೇಕಾಗಿಲ್ಲ. ಎಲ್ಲ ಪಡಿತರ ಚೀಟಿದಾರರು ಅಂದರೆ ಎಪಿಎಲ್, ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿಯ ಕುಟುಂಬದ ಸದಸ್ಯರೂ ಇಕೆವೈಸಿಯನ್ನು ನೀಡಬೇಕು. ಹೆಚ್ಚಿನ ವಿವರಕ್ಕೆ ದೂರವಾಣಿ ಸಂಖ್ಯೆ 08255-232125 ಸಂಪರ್ಕಿಸಬಹುದು ಎಂದು ತಹಸೀಲ್ದಾರ್ ರಶ್ಮಿ ಎಸ್.ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…