Editor: Harish Mambady
ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಹಾಗೂ ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಯೋಗದೊಂದಿಗೆ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಯುವ ಕಾಂಗ್ರೆಸ್, ನರಿಕೊಂಬು ವಲಯ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಅಂತರ್ಜಿಲ್ಲಾ ಮಟ್ಟದ ಪ್ರೊ ಮಾದರಿಯ ಪುರುಷರ ಹೊನಲು ಬೆಳಕಿನ 60 ಕೆಜಿ ವಿಭಾಗದ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ 18ರಂದು ಶನಿವಾರ ನಡೆಯಲಿದೆ.
ನರಿಕೊಂಬು ಮೊಗರ್ನಾಡಿನಲ್ಲಿ ನಡೆಯುವ ಈ ಕೂಟಕ್ಕೆ ಭಾಗವಹಿಸಲು ಇಚ್ಛಿಸುವ ತಂಡಗಳು ಜನವರಿ 15ರೊಳಗೆ ನೋಂದಾವಣಿ ಮಾಡಬೇಕು. ಪಂದ್ಯಾಟ ಸಂಜೆ 5ರಿಂದ ಆರಂಭಗೊಳ್ಳಲಿದೆ. ಅಶಿಸ್ತಿನಿಂದ ವರ್ತಿಸಿದ ತಂಡವನ್ನು ಹೊರಗಿಡಲಾಗುವುದು. ಚರ್ಚೆಗೆ ಆಸ್ಪದವಿಲ್ಲ. ಆಟಗಾರರು ಕಡ್ಡಾಯವಾಗಿ ಶೂ ಧರಿಸತಕ್ಕದ್ದು ಎಂದು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಪಂದ್ಯಾಕೂಟದ ಮುಖ್ಯ ತಾಂತ್ರಿಕ ಸಲಹೆಗಾರ ಬೇಬಿ ಕುಂದರ್ ತಿಳಿಸಿದರು.
ಕೂಟದ ಗೌರವಾಧ್ಯಕ್ಷರಾಗಿ ರಮಾನಾಥ ರೈ, ಅಧ್ಯಕ್ಷರಾಗಿ ಪ್ರಕಾಶ್ ಕಾರಂತ, ಉಪಾಧ್ಯಕ್ಷರಾಗಿ ಮಾಧವ ಪೂಜಾರಿ ಕರ್ಬೆಟ್ಟು, ಕೋಶಾಧಿಕಾರಿಯಾಗಿ ಉಮೇಶ್ ನೆಲ್ಲಿಗುಡ್ಡೆ ನಾಯಿಲ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಸಾದ್ ಗಾಣಿಗ, ಜತೆಕಾರ್ಯದರ್ಶಿಗಳಾಗಿ ಕೃಷ್ಣಪ್ಪ ಪೂಜಾರಿ ನಾಟಿ, ಶೇಖರ ಪೂಜಾರಿ, ಕಾರ್ಯದರ್ಶಿಗಳಾಗಿ ದಿವಾಕರ ಪೂಜಾರಿ ಏಲಬೆ, ಉಮೇಶ ಬೋಳಂತೂರು ಇದ್ದು, ಸಲಹೆಗಾರರಾಗಿ ಕೃಷ್ಣಪ್ಪ ಬಂಗೇರ ಮತ್ತು ಚಂದ್ರಶೇಖರ ಕರ್ಣ ಕಾರ್ಯನಿರ್ವಹಿಸಲಿದ್ದಾರೆ. ಸಂಜೆ 7ಕ್ಕೆ ನಡೆಯುವ ಕಾರ್ಯಕ್ರಮವನ್ನು ಉದ್ಯಮಿ ರಘುನಾಥ ಸೋಮಯಾಜಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ವಹಿಸುವರು. ನಾನಾ ಕ್ಷೇತ್ರಗಳ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಕುಂದರ್ ಹೇಳಿದರು. ಸುಮಾರು 40 ತಂಡಗಳು ಇದರಲ್ಲಿ ಭಾಗವಹಿಸಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಶೆಟ್ಟಿ ಮಾಣಿ, ಪ್ರಮುಖರಾದ ಮಾಧವ ಪೂಜಾರಿ ಕರ್ಬೆಟ್ಟು, ಉಮೇಶ್ ನೆಲ್ಲಿಗುಡ್ಡೆ, ಪ್ರಸಾದ್ ಗಾಣಿಗ, ಕೃಷ್ಣಪ್ಪ ಪೂಜಾರಿ ನಾಟಿ, ಉಮೇಶ್ ಬೋಳಂತೂರು, ರವೀಂದ್ರ ಸಪಲ್ಯ, ಆಲ್ಬರ್ಟ್ ಮೆನೇಜಸ್ ಉಪಸ್ಥಿತರಿದ್ದರು.