ಲೋರೆಟ್ಟೊ ಮಾತಾ ಚರ್ಚ್ ನಲ್ಲಿ ಕ್ರಿಸ್ಮಸ್ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಾಯಂಕಾಲದ ಬಲಿಪುಜೆಯಲ್ಲಿ ಸಾವಿರಾರು ಭಕ್ತಾದಿಗಳು ಭಕ್ತಿಯಿಂದ ಯೇಸು ಕ್ರಿಸ್ತರ ಜನನವನ್ನು ಬಲಿಪುಜೆಯೊಂದಿಗೆ ಆಚರಿಸಿದರು.
ಪ್ರಧಾನ ಧರ್ಮ ಗುರುಗಳಾಗಿ ವಂ.ಜೊಸ್ಸಿ ಲೋಬೊ ರವರು,ಚರ್ಚ್ ಧರ್ಮಗುರುಗಳಾದ ವಂ.ಎಲಿಯಸ್ ಡಿಸೋಜಾ,ವಂ. ದಿಲ್ರಾಜ್ ಸಿಕ್ವೆರ,ವಂ.ಚಾರ್ಲ್ಸ್ ರವರು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳೊಂದಿಗೆ ಅರ್ಪಿಸಿದರು. ಬಲಿಪೂಜೆಗೆ ಸಹಕರಿಸಿದ ಧಾನಿಗಳಿಗೆ ಗೌರವಪೂರ್ವಕ ವಾಗಿ ಅಲಂಕರಿಸಿದ ಮೇಣದ ಬತ್ತಿಗಳನ್ನು ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ಏಸುಕ್ರಿಸ್ತರರ ಜನುಮ ದಿನಾಚರಣೆಯ ಪ್ರಮುಖ್ಯತೆ ಯನ್ನು ಪ್ರಧಾನ ಧರ್ಮಗುರುಗಳು ಪ್ರವಚನ ನೀಡಿದರು.ಚರ್ಚ್ ನ ಮುಂಭಾಗದ ಮುಖ್ಯ ರಸ್ತೆಯನ್ನು ಲೋರೆಟ್ಟೊ ಫ್ರೆಂಡ್ಸ್ (ರಿ) ಇವರ ಪ್ರಯೋಜಕತ್ವ ದಿಂದ ವಿದ್ಯುಡಿಪಾಲಂಕರದಿಂದ ಅಲಂಕಾರಗೊoಡಿತ್ತು.ಚರ್ಚ್ ನ್ನು ರಂಗು ರಂಗಿನ ವಿದ್ಯುದಿಪಾಲಂಕರದಿಂದ ಕಂಗೊಳಿಸಲಾಗಿತ್ತು. ಬಲಿ ಪೂಜೆಯ ಬಳಿಕ ಐಸಿವೈಮ್ ನಿಂದ ಸಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಲೋರೆಟ್ಟೊ ಐಸಿವೈಮ್ ಗೆ ಬೆಳ್ಳಿ ಹಬ್ಬದ ಸಂಭ್ರಮದ ಪ್ರಯುಕ್ತ ಚರ್ಚ್ ಗಾರ್ಡನ್ ನ್ನು ,ನಾಮಫಲಕ ವನ್ನೂ ನೆರೆದಿದ್ದ ಧರ್ಮಗುರುಗ ಉದ್ಘಾಟನೆ ಮಾಡಿದರು.ಚರ್ಚ್ ಆವರಣದಲ್ಲಿ ಏಸುಕ್ರಿಸ್ತರ ಜನ್ಮ ದಿನವನ್ನು ಸಾರುವ ಗೋದಲಿಯನ್ನು ಐಸಿವೈಮ್ ಸದಸ್ಯರು ನಿರ್ಮಿಸಿದರು.ಸಂಭ್ರಮದಲ್ಲಿ ಪಾಲ್ಗೊಂಡ ಎಲ್ಲಾ ಭಕ್ತಾದಿಗಳಿಗೆ ಕಾಫಿ ಹಾಗೂ ಕೇಕ್ ವಿತರಿಸಲಾಯಿತು. ಧರ್ಮಗುರುಗಳು ಸರ್ವರರನ್ನು ವಂದಿಸಿದರು.